Webdunia - Bharat's app for daily news and videos

Install App

ಸಹೋದ್ಯೋಗಿಯ ಪ್ರೀತಿಯಲ್ಲಿ ಕಳೆದುಹೋದ ನನಗೆ ಹೆಂಡತಿಯ ಜೊತೆ ಬದುಕಲು ಆಗುತ್ತಿಲ್ಲ. ಯಾರನ್ನ ಆಯ್ಕೆ ಮಾಡಲಿ?

Webdunia
ಗುರುವಾರ, 14 ಮಾರ್ಚ್ 2019 (12:18 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 9 ವರ್ಷವಾಗಿದೆ. ನನಗೆ 3 ವರ್ಷದ ಹೆಣ‍್ಣು ಮಗು ಹಾಗೂ 7 ತಿಂಗಳ ಗಂಡು ಮಗುವಿದೆ. ಆದರೆ ನಾನು ನನ್ನ ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದೇನೆ. ಆಕೆಗೆ ಮದುವೆಯಾಗಿದ್ದು, ಮಕ್ಕಳಿಲ್ಲ. ನಮ್ಮಬ್ಬರ ಸಂಬಂಧದ ಬಗ್ಗೆ ನನ್ನ ಪತ್ನಿಗೆ ತಿಳಿದ ಕಾರಣ ನಾನು ಆಕೆಯ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಹೇಳಿದ್ದೆ. ಆದರೆ ನನಗೆ ಸಹೋದ್ಯೋಗಿಯನ್ನು ಬಿಡಲು ಇಷ್ಟವಿಲ್ಲ. ಹಾಗೇ ನನ್ನ ಪತ್ನಿಗೆ ಡೈವರ್ಸ್ ಕೊಟ್ಟರೆ ಆಕೆ ನನ್ನ ಮಕ್ಕಳನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾಳೆ. ನನಗೆ ನನ್ನ ಮಕ್ಕಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ನಾನು ಏನು ಮಾಡಲಿ?  ದಯವಿಟ್ಟು ಪರಿಹಾರ ತಿಳಿಸಿ-


ಉತ್ತರ : ಇದು ತುಂಬಾ ಕಠಿಣ ಪರಿಸ್ಥಿತಿಯಾಗಿದ್ದು, ನಾನು ನೀಡುವ ಕೆಲವು ಸಲಹೆಗಳ ಮೂಲಕ ನಿಮ್ಮ ಜೀವನದಲ್ಲಿ ನೀವು ಯಾರನ್ನ ಆಯ್ಕೆ ಮಾಡುತ್ತೀರಿ ಎಂಬುದನ್ನು ನೀವೇ ನಿರ್ಧಾರ ಮಾಡಬೇಕು.


ನಿಮ್ಮ ಜೊತೆ ಮದುವೆಯಾಗಲು ತನ್ನ ದಾಂಪತ್ಯ ಜೀವನವನ್ನು ಮುರಿದುಕೊಂಡು ಬರುವ  ನಿಮ್ಮ ಸಹೋದ್ಯೋಗಿಯ ಜೊತೆ ನೀವು ಸಂತೋಷದಿಂದ ಜೀವನ ಸಾಗಿಸುತ್ತೀರಿ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಮುಂದೆ ಜೀವನದಲ್ಲಿ ನಿಮ್ಮ ನಡುವೆ ಅಪನಂಬಿಕೆ ಮೂಡಬಹುದು.


ಆದ್ದರಿಂದ ನೀವು ನಿಮ್ಮ ದೀರ್ಘಕಾಲದ ಸಂಬಂಧದ ಬಗ್ಗೆ, ನಿಮ್ಮ ಹೆಂಡತಿ, ಮಕ್ಕಳ ಬಗ್ಗೆ ಯೋಚಿಸುವುದು ಉತ್ತಮ. ನಿಮ್ಮ ಹೆಂಡತಿ ಇಬ್ಬರು ಮಕ್ಕಳನ್ನು ನಿರ್ವಹಿಸುತ್ತಾರೆ. ಆದ್ದರಿಂದ ನಿಮ್ಮ ಜೊತೆ ಸಮಯ ಕಳೆಯಲು ಆಕೆಗೆ ಕಷ್ಟವಾಗುತ್ತಿರಬಹುದು. ಹಾಗೇ ನಿಮ್ಮ ಸಹದ್ಯೋಗಿ ಹಾಗೂ ನೀವು ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ನೀವು ಹೆಚ್ಚು ಸಮಯ ಆಕೆಯ ಜೊತೆ ಇರುತ್ತೀರಿ. ಆದರೆ ನೀವು ಸಹದ್ಯೋಗಿಯನ್ನು ಮದುವೆಯಾದ ನಂತರ ನಿಮ್ಮ ಸಂಬಂಧ ಹೀಗೆ ಇರಲು ಸಾಧ್ಯವಿಲ್ಲ. ಯಾಕೆಂದರೆ ನೀವು ಜೀವನ ನಡೆಸಲು ಹೊರಗಡೆ ದುಡಿಯಲು ಹೋಗಲೇಬೇಕು. ಆದ್ದರಿಂದ ನೀವು ರಿಲೇಶನ್ ಶಿಫ್ ಕೌನ್ಸಿಲರ್ ನ್ನು ಒಮ್ಮೆ ಭೇಟಿ ಮಾಡಿ ಸಲಹೆ ಪಡೆದು ನಿರ್ಧಾರ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments