Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಬಾಯಿಯನ್ನು ದುರ್ಗಂಧದಿಂದ ಮುಕ್ತವಾಗಿರಿಸುವುದು ಹೇಗೆ..?!

ನಿಮ್ಮ ಬಾಯಿಯನ್ನು ದುರ್ಗಂಧದಿಂದ ಮುಕ್ತವಾಗಿರಿಸುವುದು ಹೇಗೆ..?!
, ಮಂಗಳವಾರ, 19 ಜೂನ್ 2018 (16:58 IST)
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿಯ ದುರ್ಗಂಧದಂತಹ ಸಮಸ್ಯೆಗಳು ಬಹುತೇಕರಲ್ಲಿ ಕಂಡುಬರುತ್ತದೆ. ಬಾಯಿ ದುರ್ಗಂಧಬೀರುವುದು, ಹಲ್ಲಿನ ಹುಳುಕು ಸಾಮಾನ್ಯವಾದ ಸಮಸ್ಯೆಗಳಾಗಿವೆ.

ನೀವು ಸ್ನೇಹಿತರೊಂದಿಗೆ ಡೇಟ್‌ಗೆ ಹೋದಾಗ, ಕೆಲಸದ ಸಂದರ್ಶನಕ್ಕೆ ಹೋದಾಗ ನಿಮ್ಮ ಉಸಿರು ತಾಜಾ ಆಗಿರುವುದು ಮುಖ್ಯವಾಗಿರುತ್ತದೆ. ತಾಜಾ ಉಸಿರನ್ನು ಪಡೆಯಲು ಹಲವಾರು ಮಾರ್ಗಗಳಿವೆ. ಪ್ರತಿದಿನ ನಿಮ್ಮ ಬಾಯಿ ದುರ್ಗಂಧರಹಿತವಾಗಿರಲು ದೀರ್ಘ ಮತ್ತು ಅಲ್ಪಾವಧಿಯ ಮಾರ್ಗಗಳನ್ನು ಇಲ್ಲಿ ನೋಡಿ.
 
* ಚೆನ್ನಾಗಿ ಬ್ರಷ್ ಮಾಡಿ: ನಿಮ್ಮ ಹಲ್ಲುಗಳ ಮೇಲಿನ ಜಿಗುಟು ಅಥವಾ ಹಲ್ಲಿನಲ್ಲಿ ಸಿಕ್ಕಿಬಿದ್ದ ಆಹಾರ ಪದಾರ್ಥಗಳು ಬ್ಯಾಕ್ಟೀರಿಯಾವನ್ನು ಸಂಗ್ರಹಿಸುತ್ತದೆ. ಇದು ಬಾಯಿಯ ದುರ್ಗಂಧಕ್ಕೂ ಕಾರಣ. ಆದ್ದರಿಂದ ಪ್ರತಿದಿನ ಕನಿಷ್ಟ ಎರಡು ಬಾರಿ ಬ್ರಷ್ ಮಾಡಿ. ರಾತ್ರಿ ಊಟವಾದ ನಂತರ ಬ್ರಷ್ ಮಾಡಿ ಮಲಗುವ ಅಭ್ಯಾಸ ಮಾಡಿಕೊಳ್ಳಿ.
 
* ಚೆನ್ನಾಗಿ ಬಾಯಿ ಮುಕ್ಕಳಿಸಿ: ಆಹಾರವನ್ನು ಸೇವಿಸಿದ ನಂತರ ಅದರ ತುಣುಕುಗಳು ಹಲ್ಲಿನಲ್ಲೋ ಒಸಡಿನಲ್ಲೋ ಇರುವ ಸಾಧ್ಯತೆಗಳಿರುತ್ತವೆ. ಅದು ಬಾಯಿಯ ದುರ್ಗಂಧಕ್ಕೆ ಮತ್ತು ಹಲ್ಲುಗಳು ಕೆಡುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಆಹಾರ ಸೇವಿಸಿದ ತಕ್ಷಣ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.
 
* ನಾಲಿಗೆಯನ್ನು ಉಜ್ಜಿ: ಹಲ್ಲನ್ನು ಉಜ್ಜುವಾಗ ಕೇವಲ ಹಲ್ಲೊಂದನ್ನೇ ಉಜ್ಜದೇ ನಾಲಿಗೆಯನ್ನೂ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿಕೊಳ್ಳಿ.
 
* ದುರ್ಗಂಧ ಬೀರುವಂತಹ ಆಹಾರವನ್ನು ಸೇವಿಸಬೇಡಿ: ಬೆಳ್ಳುಳ್ಳಿ ಮತ್ತು ಈರುಳ್ಳಿ ಅದರಲ್ಲಿ ಪ್ರಮುಖವಾದದ್ದು. ಇವುಗಳನ್ನು ಸೇವಿಸಿದ ನಂತರ ಬ್ರಷ್ ಮಾಡಿದರೂ ಸಹ ಬಾಯಿಂದ ಬರುವ ದುರ್ಗಂಧ ಕಡಿಮೆಯಾಗುವುದಿಲ್ಲ. ಆದ್ದರಿಂದ ಆದಷ್ಟು ಇಂತಹ ಪದಾರ್ಥಗಳಿಂದ ದೂರವಿರಿ.
 
* ತಂಬಾಕು ಸೇವನೆಯನ್ನು ಬಿಡಿ: ತಂಬಾಕು ಕ್ಯಾನ್ಸರ್ ಉಂಟುಮಾಡುವುದರ ಜೊತೆಗೆ ನಿಮ್ಮ ಒಸಡುಗಳಿಗೆ ಹಾನಿ ಯುಂಟುಮಾಡಬಹುದು, ಹಲ್ಲುಗಳು ಉದುರುವುದಕ್ಕೆ ಕಾರಣವಾಗಬಹುದಲ್ಲದೇ ಬಾಯಿಯ ವಾಸನೆಗೆ ಕಾರಣವಾಗುತ್ತದೆ.
 
* ಊಟದ ನಂತರ ಬೇರೆ ಆಹಾರಗಳನ್ನು ಬಿಟ್ಟು ಚೀವಿಂಗ್ ಗಮ್ ತಿನ್ನಿ: ಊಟವಾದ ನಂತರ ಇತರ ತಿಂಡಿಗಳನ್ನು ಸೇವಿಸದೇ ಚೀವಿಂಗ್ ಗಮ್ ತಿನ್ನಿ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ಕರೆ ಪ್ರಿಯವಾಗಿದ್ದು ಅವು ಆಮ್ಲವನ್ನು ತಯಾರಿಸಲು ಅದನ್ನು ಬಳಸುತ್ತವೆ. ಅವು ಹಲ್ಲುಗಳನ್ನು ಕೆಡಿಸಿ ಬಾಯಿ ದುರ್ಗಂಧ ಬೀರುವಂತೆ ಮಾಡುತ್ತವೆ. ಆದ್ದರಿಂದ ಸಕ್ಕರೆ ರಹಿತ ಚೀವಿಂಗ್ ಗಮ್ ಸೇವಿಸಿದರೆ ಒಳ್ಳೆಯದು.
 
* ನಿಮ್ಮ ಒಸಡುಗಳನ್ನು ಆರೋಗ್ಯಕರವಾಗಿರಿಸಿಕೊಳ್ಳಿ: ಒಸಡುಗಳ ಆರೋಗ್ಯ ಕೆಟ್ಟರೆ ಅದು ದುರ್ಗಂಧವನ್ನು ಬೀರುತ್ತದೆ. ಹಲ್ಲುಗಳ ತಳದಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳು ವಾಸನೆಯನ್ನು ಉಂಟುಮಾಡುತ್ತದೆ. ಆದ್ದರಿಂದ ನಿಮಗೆ ಯಾವುದೇ ಒಸಡಿನ ಕಾಯಿಲೆಗಳಿದ್ದರೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ.
 
* ನಿಮ್ಮ ಬಾಯಿಯನ್ನು ತೇವಯುತವಾಗಿರಿಸಿಕೊಳ್ಳಿ: ನಿಮ್ಮ ಬಾಯಿಯಲ್ಲಿ ಲಾಲಾರಸ ಸಾಕಷ್ಟು ಪ್ರಮಾಣದಲ್ಲಿ ಇರದಿದ್ದರೆ ನಿಮಗೆ ಹಲ್ಲಿನ ಹುಳುಕು ಮತ್ತು ಬಾಯಿ ವಾಸನೆ ಉಂಟಾಗಬಹುದಾಗಿದೆ. ಆದ್ದರಿಂದ ನಿಮ್ಮ ಬಾಯಿ ಒಣಗಿದ್ದರೆ ಸಾಕಷ್ಟು ನೀರನ್ನು ಕುಡಿಯಿರಿ.
 
* ಊಟ ಮಾಡಿ ಮಲಗುವ ಮೊದಲು 3-4 ಏಲಕ್ಕಿ ಕಾಳುಗಳನ್ನು ಅಗಿದು ಮಲಗಿದರೆ ಅದು ಬಾಯಿಯ ದುರ್ಗಂಧವನ್ನು ಕಡಿಮೆ ಮಾಡುತ್ತದೆ.
 
* ವೈದ್ಯರನ್ನು ಭೇಟಿ ಮಾಡಿ: ನಿಮ್ಮ ಈ ಉತ್ತಮ ಪ್ರಯತ್ನಗಳ ನಡುವೆಯೂ ಬಾಯಿಯ ದುರ್ಗಂಧ ಮುಂದುವರಿದರೆ ನಿಮ್ಮ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ.
 
ಈ ಸಲಹೆಗಳನ್ನು ಪಾಲಿಸಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿ ಬಳಸಿ ಸೌಂದರ್ಯ ಹೆಚ್ಚಿಸಿ