ಬೆಂಗಳೂರು: ಇಂದಿನ ಟೆಕ್ನಾಲಜಿ ಯುಗದಲ್ಲಿ ಮಕ್ಕಳು ಬಹುಬೇಗನೇ ಬಾಹ್ಯ ಪ್ರಪಂಚಕ್ಕೆ ಪರಿಚಿತರಾಗುತ್ತಾರೆ. ಇನ್ನೇನು ಎದ್ದು ನಡೆಯಲು ಆರಂಭಿಸುವ ಮಕ್ಕಳೂ ಮೊಬೈಲ್ ನಲ್ಲಿ ವಿಡಿಯೋ, ಗೇಮ್ಸ್ ಆಡಲು ಕಲಿಯುತ್ತಾರೆ.
ತಿಳಿದೋ ತಿಳಿಯದೆಯೋ ಅಶ್ಲೀಲ ವಿಡಿಯೋ ಒಂದನ್ನು ಕ್ಲಿಕ್ಕಿಸುವ ಮಕ್ಕಳು ಕುತೂಹಲದಿಂದ ವೀಕ್ಷಿಸುತ್ತಾರೆ. ಇದು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದು ಖಂಡಿತಾ.
ಆದರೆ ಇಂತಹ ವಿಡಿಯೋ ನೋಡುವಾಗ ಪೋಷಕರಾದ ನಮ್ಮ ಗಮನಕ್ಕೆ ಬಂದರೆ ಅದನ್ನು ಹೇಗೆ ನಿಭಾಯಿಸಬೇಕು? ತಕ್ಷಣವೇ ನಾವು ಬಾಯಿಗೆ ಬಂದಂತೆ ಬೈಯುತ್ತೇವೆ, ಇಲ್ಲವೇ ಆ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ.
ಅಸಲಿಗೆ ನಾವು ತಪ್ಪು ಮಾಡುವುದೇ ಇಲ್ಲಿ. ಯಾಕೆಂದರೆ ಆ ಮಗುವಿಗೆ ಅದು ಕೆಟ್ಟ ವಿಡಿಯೋ ಎಂಬ ಅರಿವು ಕೂಡಾ ಇರುವುದಿಲ್ಲ. ಆದರೆ ಪೋಷಕರು ವಿಪರೀತ ಬೈದಾಗ ಒಂದೋ ಅದರ ಕುತೂಹಲ ಹೆಚ್ಚಾಗಬಹುದು ಅಥವಾ ಬೈದಿದ್ದಕ್ಕೆ ಮನನೊಂದು ಕೂರಬಹುದು. ಅಪರಾಧಿ ಮನೋಭಾವದಿಂದ ಕುಗ್ಗಬಹುದು.
ಅದರ ಬದಲು ಆ ಮಗುವನ್ನು ಹತ್ತಿರದಲ್ಲಿ ಕೂರಿಸಿಕೊಂಡು ನಿಧಾನವಾಗಿ ತಿಳಿಹೇಳಿ. ಆ ವಿಡಿಯೋ ನೋಡುವುದು ಎಷ್ಟು ಕೆಟ್ಟದ್ದು ಎಂದು ಮಕ್ಕಳ ಭಾಷೆಯಲ್ಲೇ ತಿಳಿಹೇಳಿ. ಅದನ್ನು ನೋಡುವುದು ಮಾಡಬಾರದ ಅಪರಾಧ ಎಂದು ಬಿಂಬಿಸುವ ಬದಲು ಆ ವಿಡಿಯೋ ನಮ್ಮಂಥ ಒಳ್ಳೆಯ ಮಕ್ಕಳಿಗಲ್ಲ ಎಂದು ತಿಳಿಹೇಳಿ. ಹೀಗೆ ಮಾಡಿದರೆ ಮಕ್ಕಳು ಕೇಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ