ಬೆಂಗಳೂರು: ಎಷ್ಟು ಹೊತ್ತು ಬ್ರಷ್ ಮಾಡಬೇಕು? ಹೀಗೊಂದು ಪ್ರಶ್ನೆ ಎಲ್ಲರಿಗೂ ಕಾಡುವುದು ಸಹಜ. ಎಷ್ಟು ಹೊತ್ತು ಬ್ರಷ್ ಮಾಡಿದರೆ ಹಲ್ಲುಗಳು ಆರೋಗ್ಯವಾಗಿರುತ್ತದೆ? ಇದಕ್ಕೆ ತಜ್ಞರೇ ಉತ್ತರಿಸಿದ್ದಾರೆ.
ದಂತ ವೈದ್ಯಕೀಯ ಮ್ಯಾಗಜಿನ್ ಒಂದರಲ್ಲಿ ಪ್ರಕಟವಾದ ಲೇಖನದ ಪ್ರಕಾರ ನಾವು ದಿನಕ್ಕೆ ಎರಡು ಹೊತ್ತು ಬ್ರಷ್ ಮಾಡಬೇಕು. ಅದರಲ್ಲೂ ಪ್ರತೀ ಬಾರಿ ಬ್ರಷ್ ಮಾಡುವಾಗ ಸರಾಸರಿ ಎರಡು ನಿಮಿಷ ಬ್ರಷ್ ಮಾಡಿದರೆ ಒಳ್ಳೆಯದು.
ದಂತ ವೈದ್ಯರ ಅಧ್ಯಯನದ ಪ್ರಕಾರ ಎರಡು ನಿಮಿಷ ಬ್ರಷ್ ಮಾಡಿದವರು 45 ಸೆಕೆಂಡ್ ಬ್ರಷ್ ಮಾಡಿದವರಿಗಿಂತ ಶೇ. 25 ರಷ್ಟು ಹೆಚ್ಚು ಕೊಳೆ ಹೋಗಲಾಡಿಸಿದ್ದರಂತೆ. ಹಾಗಾಗಿ ಎರಡು ನಿಮಿಷದ ಅವಧಿ ಸೂಕ್ತ ಎನ್ನಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ