ಬೆಂಗಳೂರು : ಕಾಜಲ್ ಹೆಣ್ಣಿನ ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದರೆ ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ಕಾಜಲ್ ಗಳನ್ನು ಬಳಸಿದರೆ ಕಣ್ಣಿಗೆ ಹಾನಿಯಾಗಬಹುದು. ಆದ್ದರಿಂದ ಮನೆಯಲ್ಲಿಯೇ ಕಾಜಲ್ ತಯಾರಿಸಿ ಬಳಸಿ ಅಂದದ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.
5 ಬಾದಾಮಿಗಳನ್ನು ತೆಗೆದುಕೊಂಡು ಪ್ಲೇಟ್ ಅಥವಾ ಸೆರಾಮಿಕ್ ಬೌಲ್ ನಲ್ಲಿರಿಸಿ. ಚೆನ್ನಾಗಿ 10 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಬಾದಾಮಿಯನ್ನು ಚೆನ್ನಾಗಿ ಪುಡಿಮಾಡಿ ಅದಕ್ಕೆ ಅಲೋವೆರಾ ಜೆಲ್ 3ಚಮಚ ಮತ್ತು 3 ಚಮಚ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ ಮಾಡಿ. ನೈಸರ್ಗಿಕ ಕಾಡಿಗೆ ಸಿದ್ಧವಾಗಿದ್ದು, ಈ ಮಿಶ್ರಣವನ್ನು ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ. ಅಗತ್ಯವಿರುವಾಗ ಬಳಸಿ.