ಬೆಂಗಳೂರು: ಹಲ್ಲು ಹಳದಿಗಟ್ಟಿದೆಯೇ? ಬಾಯ್ತುಂಬಾ ನಗಲೂ ನಾಚಿಕೆಯಾಗುತ್ತಿದೆಯೇ? ಹಾಗಿದ್ದರೆ ಕೆಲವು ಸಿಂಪಲ್ ಮನೆ ಮದ್ದು ಮಾಡಿ ನೋಡಬಹುದು.
ಬೇಕಿಂಗ್ ಸೋಡಾ
ಹಲ್ಲುಜ್ಜಲು ಬಳಸುವ ಪೇಸ್ಟ್ ಜತೆಗೆ ಸ್ವಲ್ಪ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಹಲ್ಲುಜ್ಜಿ ನೋಡಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಹಲ್ಲು ಹಳದಿಗಟ್ಟುವಿಕೆ ತಡೆಯಬಹುದು.
ಕಿತ್ತಳೆ ಸಿಪ್ಪೆ
ಮೊಡವೆ, ತ್ವಚೆ ಸಂರಕ್ಷಣೆಗೆ ಕಿತ್ತಳೆ ಸಿಪ್ಪೆ ಉಪಯೋಗ ಕೇಳಿದ್ದೇವೆ. ಅದೇ ರೀತಿ ಹಲ್ಲು ಹಳದಿಗಟ್ಟುವಿಕೆಗೂ ಇದನ್ನು ಬಳಸಬಹುದು. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕಿತ್ತಳೆ ಸಿಪ್ಪೆ ಬಳಸಿ ಹಲ್ಲು ಉಜ್ಜಿಕೊಂಡರೆ ಸಾಕು.
ಸ್ಟ್ರಾಬೆರಿ
ಸ್ಟ್ರಾಬೆರಿ ಹಣ್ಣು ತಿನ್ನುವುದಕ್ಕೆ ಮಾತ್ರವಲ್ಲ, ಇದನ್ನು ಪೇಸ್ಟ್ ಮಾಡಿಕೊಂಡು ವಾರಕ್ಕೆರಡು ಬಾರಿ ಹಲ್ಲುಜ್ಜಿಕೊಂಡರೆ ಹಳದಿಗಟ್ಟುವಿಕೆಯನ್ನು ನಿಯಂತ್ರಿಸಬಹುದು.
ನಿಂಬೆ ಹಣ್ಣು
ನಿಂಬೆ ಹಣ್ಣು ಪಾತ್ರೆಯ ಜಿಡ್ಡನ್ನೇ ಹೋಗಲಾಡಿಸುತ್ತದೆಯಂತೆ. ಹಾಗಿದ್ದ ಮೇಲೆ ನಿಮ್ಮ ಹಲ್ಲು ಯಾವ ಲೆಕ್ಕ? ಪ್ರತಿ ನಿತ್ಯ ನಿಂಬೆ ರಸದಿಂದ ಬಾಯಿ ಮುಕ್ಕಳಿಸಿಕೊಂಡರೆ ಸಾಕು. ಅಥವಾ ನಿಂಬೆಯ ಸಿಪ್ಪೆಯಿಂದ ಹಲ್ಲುಜ್ಜಿಕೊಂಡರೂ ಸಾಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ