ಬೆಂಗಳೂರು:ಮನೆಯಲ್ಲಿಯೇ ಇರುವ ಹಾಗೂ ನಮ್ಮ ಕೈಗೆಟುಕುವ ಹಲವಾರು ವಸ್ತುಗಳು, ಗಿಡಮೂಲಿಕೆಗಳು ನಮ್ಮ ಖಾಯಿಲೆಗಳನ್ನು ವಾಸಿಮಾಡಲು ತುಂಬಾ ಸಹಾಯಕಾರಿಯಾಗಿರುತ್ತವೆ. ಆದರೆ ನಾವು ಇವುಗಳ ಬಗ್ಗೆ ಹೆಚ್ಚಾಗಿ ಗಮನೆವನ್ನೇ ಹರಿಸದೇ ಓ ಇಷ್ಟೇನಾ ಅಂತ ನೆಗ್ಲೆಕ್ಟ್ ಮಾಡಿ ಬಿಡುತ್ತೇವೆ. ಇಂತಹ ಒಂದು ಉತ್ತಮವಾದ ಮನೆ ಮದ್ದಿನ ಬಗ್ಗೆ ಇಲ್ಲಿ ವಿವರಿಸಕಾಗಿದೆ.
ನೆಲ್ಲಿಕಾಯಿ ಮತ್ತು ಮೆಂತ್ಯಾ ಜ್ಯೂಸ್: ನೆಲ್ಲಿಕಾಯಿ ಜ್ಯೂಸ್ ಗೆ ಮೆಂತ್ಯಾ ಪುಡಿ ಹಾಕಿ ಪ್ರತಿದಿನ ಕುಡಿಯುವುದರಿಂದ ಡಯಾಬಿಟೀಸ್ ಅಥವಾ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ.
ಮೂರು ಚಮಚ ನೆಲ್ಲಿಕಾಯಿ ಜ್ಯೂಸ್ ಗೆ ಒಂದು ಚಮಚ ಮೆಂತ್ಯಾ ಪುಡಿಯನ್ನು ಹಾಕಿ ನಿತ್ಯವೂ ಸೇವಿಸುವುದರಿಂದ ಮಧುಮೇಹ ಕಾಯಿಲೆಯನ್ನು ಸುದಾರಿಸಬಹುದು. ಈ ಜ್ಯೂಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿನ ಸಕ್ಕರೆ ಮತ್ಟವನ್ನು ಕಡಿಮೆಮಾಡುತ್ತದೆ. ಹಾಗಾಗಿ ಮಧುಮೇಹ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.
ಅಲ್ಲದೇ ಈ ಪಾನೀಯದಲ್ಲಿರುವ ವಿಟಮಿನ್ ಮತ್ತು ಆಟಿ ಆಕ್ಸಿಡೆಂಟ್ ಹೃದಯದ ಸ್ನಾಯುಗಳನ್ನು ಬಲಿಷ್ಠಗೊಳಿಸಿ ಹಲವಾರು ರೀತಿಯ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.
ಅಷ್ಟೇ ಅಲ್ಲ ನೆಲ್ಲಿಕಾಯಿ ಜ್ಯೂಸ್ ಮತ್ತು ಮೆಂತ್ಯಾ ಮಿಶ್ರಣದ ಜ್ಯೂಸ್ ಕುಡಿಯುವುದರಿಂದ ಮೂತ್ರನಾಳದಲ್ಲಿ ಕಲ್ಲು ಬೆಳೆಯುವುದನ್ನು ತಡೆಯುತ್ತದೆ. ಮೂತ್ರನಾಳ ಹಾಗೂ ಯಕೃತ್ ನಲ್ಲಿ ಇರುವ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂತ್ರನಾಳದಲ್ಲಿ ಕಲ್ಲುಬೆಳೆಯುವದನ್ನು ತಪ್ಪಿಸುತ್ತದೆ.
ಈ ಜ್ಯೂಸ್ ನಲ್ಲಿ ವಿಟಮಿನ್ ಸಿ ಯಥೇಚ್ಛವಾಗಿರುವುದರಿಂದ ಅದು ಬಾಯಿಹುಣ್ಣು, ಹೊಟ್ಟೆ ಹುಣ್ಣು, ಉರಿಯೂತದಂತಹ ಸಮಸ್ಯೆಯನ್ನು ನಿವಾರಿಸುತ್ತದೆ.