ಬೆಂಗಳೂರು : ಮಳೆಗಾಲ ಶುರುವಾಯ್ತೆಂದರೆ ಶೀತ ,ಗಂಟಲು ನೋವು ಇತ್ಯಾದಿ ಕಾಯಿಲೆಗಳು ಶುರುವಾಗುತ್ತದೆ. ಪದೇ ಪದೇ ಕಾಯಿಲೆ ಬೀಳುವುದರಿಂದ ದೇಜದ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಶೀತ, ಗಂಟಲು ನೋವಿನಿಂದ ತಪ್ಪಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.
ಸಾಮಾನ್ಯವಾಗಿ ನೆಗಡಿ ಗಂಟಲು ಕೆರೆತಕ್ಕೆ ತುಳಸಿ, ಅರಿಶಿಣ, ಲವಂಗ ಕಂದು ಸಕ್ಕರೆ ತುಂಬಾ ಉತ್ತಮ. ಇವುಗಳಲ್ಲಿರುವ ಔಷಧೀಯ ಗುಣಗಳು ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ಉಪಯುಕ್ತವಾಗಿವೆ.
ಕಂದು ಸಕ್ಕರೆ - 1 ಟೇಬಲ್ ಸ್ಪೂನ್
ಲವಂಗ - 4 -5
ತುಳಸಿ -5-6
ಅರಿಶಿಣ - 1 ಟೇಬಲ್ ಸ್ಪೂನ್
ಇವೆಲ್ಲಾ ಪದಾರ್ಥಗಳನ್ನು ಕುದಿಸಿ ಒಂದು ಕಪ್ ಗೆ ಸೋಸಿ ಬಿಸಿಯಿರುವಾಗಲೇ ಕುಡಿಯಿರಿ. ದಿನಕ್ಕೆ ಒಂದೆರಡು ಬಾರಿ ಸೇವಿಸಿದರೆ ಶೀತ ಹಾಗೂ ಗಂಟಲು ಕೆರೆತ ದೂರವಾಗುತ್ತದೆ.