Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಿರಿಯಡ್ಸ್ ಸಮಯದಲ್ಲಿ ಕಂಡುಬರುವ ಸ್ತನದ ನೋವು ಕಡಿಮೆಮಾಡಲು ಇಲ್ಲಿದೆ ಟಿಪ್ಸ್

ಪಿರಿಯಡ್ಸ್ ಸಮಯದಲ್ಲಿ ಕಂಡುಬರುವ ಸ್ತನದ ನೋವು ಕಡಿಮೆಮಾಡಲು ಇಲ್ಲಿದೆ ಟಿಪ್ಸ್
ಬೆಂಗಳೂರು , ಗುರುವಾರ, 19 ಏಪ್ರಿಲ್ 2018 (05:56 IST)
ಬೆಂಗಳೂರು : ಪಿರಿಯಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ಸ್ತನಗಳ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ಸ್ ಬದಲಾವಣೆಯಾಗುವುದರಿಂದ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ನೋವು ಕಡಿಮೆಯಾಗಲು ಇಲ್ಲಿದೆ ಟಿಪ್ಸ್.


ಕ್ಯಾಸ್ಟರ್‌ ಆಯಿಲ್‌ : ಹರಳೆಣ್ಣೆ ಮತ್ತು ಆಲಿವ್‌ ಆಯಿಲ್‌ ಮಿಕ್ಸ್‌ ಮಾಡಿ ಇದರಿಂದ ಎದೆಯ ಮೇಲೆ ನಿಧಾನವಾಗಿ ಮಸಾಜ್‌ ಮಾಡುವುದರಿಂದ ಆರಾಮ ಸಿಗುತ್ತದೆ.

ಬಿಸಿ ನೀರಿನಿಂದ ಮಸಾಜ್‌ : ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಸ್ತನಗಳ ಮೇಲೆ ಇಡಿ. ಈ ರೀತಿ ಹತ್ತು ನಿಮಷಗಳ ಕಾಲ ಮೃದುವಾಗಿ ಒತ್ತುತ್ತಿದ್ದರೆ ನೋವು ನಿವಾರಣೆಯಾಗುತ್ತದೆ.

ಮಂಜುಗಡ್ಡೆಯ ಪ್ಯಾಕ್‌ : ಒಂದು ಬಟ್ಟೆಯಲ್ಲಿ ಕೆಲವು ಐಸ್‌ ಕ್ಯೂಬ್‌ ತೆಗೆದುಕೊಂಡು ಎದೆಯ ಮೇಲೆ ಇಟ್ಟು  ಮೃದುವಾಗಿ ಮಸಾಜ್‌ ಮಾಡಿದರೆ ನೋವು ಕಡಿಮೆಯಾಗುತ್ತದೆ

ಈ ಸಮಯದಲ್ಲಿ ತಿನ್ನಬೇಕಾದ ಆಹಾರಗಳು
ಪಿರಿಯಡ್ಸ್‌ ವೇಳೆ ಎದೆ ನೋವು ಇದ್ದಲ್ಲಿ ಪೌಷ್ಠಿಕ ಆಹಾರ ತಿನ್ನಿ. ಇದರೊಂದಿಗೆ ಸೋಂಪು, ಬಾಳೆಹಣ್ಣು ಅಥವಾ ಎಳನೀರು ಸೇವಿಸಿದರೆ ಸ್ತನಗಳ ನೋವು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕ್ಕೆ ಉಪಯೋಗಕ್ಕಾರಿ ಈ ಚೆಂಡು ಹೂವು