Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೈಕಾಲು ಜುಮ್ಮೆನಿಸುವಿಕೆ(ಮರಗಟ್ಟುವಿಕೆ)ಗೆ ಇಲ್ಲಿದೆ ಮನೆಮದ್ದು

ಕೈಕಾಲು ಜುಮ್ಮೆನಿಸುವಿಕೆ(ಮರಗಟ್ಟುವಿಕೆ)ಗೆ ಇಲ್ಲಿದೆ ಮನೆಮದ್ದು
ಬೆಂಗಳೂರು , ಶನಿವಾರ, 29 ಡಿಸೆಂಬರ್ 2018 (07:22 IST)
ಬೆಂಗಳೂರು : ಹೆಚ್ಚಿನವರಿಗೆ ಕೈಕಾಲು ಜುಮ್ಮೆನಿಸುವಿಕೆ(ಮರಗಟ್ಟುವಿಕೆ) ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ರಕ್ತ ಕಡಿಮೆಯಾದಾಗ , ದೇಹದಲ್ಲಿ ಸರಿಯಾಗಿ  ರಕ್ತ ಸಂಚಾರ ಆಗದೆ ಇದ್ದಾಗ ಈ ರೀತಿ ಕೈಕಾಲುಗಳು ಮರಗಟ್ಟುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು.


100 ಗ್ರಾಂ ಓಂಕಾಳನ್ನು ತೆಗೆದುಕೊಂಡು ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಶುದ್ಧ ಹಸುವಿನ ತುಪ್ಪ 50 ಗ್ರಾಂ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಮೇಲಿಟ್ಟು ಕುದಿಸಿ. ಅದರಲ್ಲಿರುವ ನೀರಿನ ಅಂಶ ಹೋಗುವವರೆಗೂ ಕುದಿಸಿ. ನಂತರ ಅದನ್ನು ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ಪ್ರತಿದಿನ 1ಚಮಚ ತೆಗೆದುಕೊಂಡು ಊಟದಲ್ಲಿ ಮಿಕ್ಸ್ ಮಾಡಿ ತಿನ್ನಿ.


ಹಾಗೇ 1ಚಮಚ ಪೇಸ್ಟ್ ತೆಗೆದುಕೊಂಡು ಜುಮ್ಮೆನ್ನುವ ಭಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿ. ನಂತರ 1 ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಲ್ಲಿ ತೊಳೆದುಕೊಳ್ಳಿ. ಹೀಗೆ ಪ್ರತಿದಿನ ಮಾಡುವುದರಿಂದ 2-3 ತಿಂಗಳಲ್ಲೇ ಈ ಸಮಸ್ಯೆ ಪರಿಹಾರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖ ,ಕೈಕಾಲುಗಳಲ್ಲಿನ ಸನ್ ಟಾನ್ ಕಡಿಮೆಯಾಗುವುದಕ್ಕೆ ಇಲ್ಲಿದೆ ನೋಡಿ ಮನೆಮದ್ದು