ಬೆಂಗಳೂರು : ಹೋಳಿ ಹಬ್ಬದಂದು ಬಣ್ಣಗಳನ್ನು ಮೈಮೇಲೆ ಎರಚುವುದರಿಂದ ನೀವು ಧರಿಸಿದ ಬಟ್ಟೆಗಳಿಗೆ ಬಣ್ಣ ಅಂಟಿಕೊಳ್ಳುತ್ತದೆ. ಈ ಬಣ್ಣಗಳು ಎಷ್ಟೇ ತೊಳೆದರೂ ಹೋಗುವುದಿಲ್ಲ. ಈ ಬಣ್ಣಗಳನ್ನು ಸುಲಭವಾಗಿ ತೆಗೆಯಲು ಹೀಗೆ ಮಾಡಿ.
ಮೊದಲಿಗೆ ನೀವು ಬಣ್ಣ ಅಂಟಿದ ಬಟ್ಟೆಗಳನ್ನು ಸಾಮಾನ್ಯವಾಗಿ ಬಟ್ಟೆ ಸೋಪ್ ಬಳಸಿ ಚೆನ್ನಾಗಿ ವಾಶ್ ಮಾಡುವ ರೀತಿಯಲ್ಲೇ ವಾಶ್ ಮಾಡಿ. ಬಳಿಕ ಮಾರುಕಟ್ಟೆಯಲ್ಲಿ ಸಿಗುವ ಕ್ಲೋತ್ ಬ್ಲೀಚ್ ಪೌಡರ್ ನೀರಿಗೆ ಹಾಕಿ ಅದರಲ್ಲಿ ಆ ಬಟ್ಟೆಯನ್ನು ನೆನೆಸಿಡಿ ½ ಗಂಟೆ ಬಿಟ್ಟು ಮತ್ತೆ ವಾಶ್ ಮಾಡಿದರೆ ಬಣ್ಣಗಳೆಲ್ಲಾ ಹೋಗಿ ಬಟ್ಟೆ ಮೊದಲಿನಂತೆ ಆಗುತ್ತದೆ.