ನಿಮ್ಮ ಪತ್ನಿ ವಯಸ್ಸು ಇಪ್ಪತ್ತೈದರಿಂದ ನಲವತ್ತೇ? ಹಾಗಾದರೆ ಅವರ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾದ ಸಮಯವಿದು. 30 ವರ್ಷದ ಬಳಿಕ ಮಹಿಳೆಯರ ಶರೀರದಲ್ಲಿ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತವೆ. ಹೀಗಾಗಿ ತೂಕ ನಿಯಂತ್ರಣ ಸುಲಭ ಸಾಧ್ಯವಾಗುವುದಿಲ್ಲ.
ಹೀಗಿದ್ದಾಗ ಅವರಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಸ್ವರೂಪದ ಕಾಯಿಲೆಗಳು ಒಕ್ಕರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಮೇರಿಕಾದ ಕ್ಯಾನ್ಸರ್ ಸೊಸೈಟಿ ನೀಡಿರುವ ವರದಿಯ ಪ್ರಕಾರ, 30 ವರ್ಷ ವಯಸ್ಸಿನ ನಂತರ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲದೆ ತೂಕ ಹೆಚ್ಚಳವಾಗಿದ್ದರೆ ಹೊಟ್ಟೆ, ಪ್ಯಾಂಕ್ರಿಯಾಸ್, ಮೂತ್ರನಾಳ ಕ್ಯಾನ್ಸರ್‌ನಂತಹ ಅಪಾಯಗಳು ಹೆಚ್ಚು.
ಸಾಮಾನ್ಯವಾಗಿ ಜನರು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಕಡೆಗಣಿಸುವ ತಪ್ಪನ್ನೆಸಗುತ್ತಾರೆ. ಮಹಾಮಾರಿ ಕ್ಯಾನ್ಸರ್ ತಗುಲಿದೆ ಎಂದು ಎಚ್ಚೆತ್ತುಕೊಳ್ಳುವ ಹೊತ್ತಿಗೆ ಸಮಯ ಮೀರಿರುತ್ತದೆ.
ಆರಂಭದಲ್ಲಿಯೇ ಕ್ಯಾನ್ಸರ್ ಬಗ್ಗೆ ಎಚ್ಚೆತ್ತುಕೊಂಡು ಚಿಕಿತ್ಸೆಯನ್ನು ಪಡೆದುಕೊಂಡರೆ ಸಾಮಾನ್ಯ ಜೀವನವನ್ನು ನಡೆಸಬಹುದು ಎನ್ನುತ್ತಾರೆ ಅಪೋಲೋ ಆಸ್ಪತ್ರೆ ವೈದ್ಯರೊಬ್ಬರು.