Sunflower Seeds: ಸೂರ್ಯಕಾಂತಿ ಎಣ್ಣೆಯನ್ನು ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ. ಆದರೆ ಸೂರ್ಯಕಾಂತಿ ಬೇಜವನ್ನೂ ಸಹ ನೇರವಾಗಿ ಆಹಾರದಲ್ಲಿ ಬಳಸಬಹುದು. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಸಹ ಇವೆ.
ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಮಸ್ಯೆಗಳು ಜನರನ್ನು ಬಾಧಿಸುತ್ತಿದೆ. ಆಹಾರದಲ್ಲಿ ಪೌಷ್ಟಿಕತೆಯ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ದೇಹದಲ್ಲಿ ಗ್ಲೂಕೋಸ್ ಮಟ್ಟ ಏರುಪೇರಾದರೆ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಮಧುಮೇಹ ಸಮಸ್ಯೆ ಕಾಡುತ್ತದೆ. ನಿಮ್ಮ ಆಹಾರ ಸೇವನೆ ಮತ್ತು ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳಿಂದ ದೇಹದಲ್ಲಿ ಸಕ್ಕರೆ ಮಟ್ಟದ ಏರುಪೇರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದಕ್ಕೆ ಉತ್ತಮ ಮಾರ್ಗ ಸೂರ್ಯಕಾಂತಿ ಬೀಜ.
ಸೂರ್ಯಕಾಂತಿ ಎಣ್ಣೆಯನ್ನು ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ. ಆದರೆ ಸೂರ್ಯಕಾಂತಿ ಬೇಜವನ್ನೂ ಸಹ ನೇರವಾಗಿ ಆಹಾರದಲ್ಲಿ ಬಳಸಬಹುದು. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಸಹ ಇವೆ. ಸೇವಿಸಲೂ ಸಹ ತುಂಬಾ ರುಚಿಕರವಾಗಿರುವ ಸೂರ್ಯಕಾಂತಿ ಬೀಜವನ್ನು ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ.
ಸೂರ್ಯಕಾಂತಿ ಬೀಜದಲ್ಲಿ ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ. ಜತೆಗೆ ಫೈಬರ್ ಅಂಶ ಕೂಡ ಅಧಿಕಾವಾಗಿರುತ್ತವೆ. ಮಧುಮೇಹಿಗಳಿಗೆ ಸೂರ್ಯಕಾಂತಿ ಬೀಜ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮಧುಮೇಹ ಸಮಸ್ಯೆ ಇರುವವರು ಆಹಾರದ ಭಾಗವಾಗಿ ಸೂರ್ಯಕಾಂತಿ ಬೀಜವನ್ನು ಸೇವಿಸುವ ಮೂಲಕ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ.
ಸೂರ್ಯಕಾಂತಿ ಬೀಜಗಳನ್ನು ನೇರವಾಗಿ ತಿನ್ನಬಹುದು. ಇಲ್ಲವೇ ನೀರಿನಲ್ಲಿ ನೆನೆಸಿ ಸೇವಿಸಬಹುದು. ಇಲ್ಲವೇ ಸೂರ್ಯಕಾಂತಿ ಎಣ್ಣೆ ತಯಾರಿಸಿ ಅದರಿಂದ ಆಹಾರ ತಯಾರಿಸಿ ಸೇವಿಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಆರೋಗ್ಯ ಪ್ರಯೋಜನಗಳು
ಅವುಗಳಲ್ಲಿರುವ ಕೊಬ್ಬಿನಾಮ್ಲಗಳು ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವರಿಗೆ ಸೂರ್ಕಾಂತಿ ಬೀಜ ಸೇವನೆ ಉತ್ತಮ ಮಾರ್ಗ.
ಸೂರ್ಯಕಾಂತಿ ಬೀಜ ಸಂಧಿವಾತ, ಅಸ್ತಮಾದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ವಿಟಮಿನ್ ಇ ಅಧಿಕಾವಾಗಿರುತ್ತದೆ. ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
ವಿಟಮಿನ್ ಸಿ ಅಂಶವಿದ್ದು ಇದು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಸೂರ್ಯಕಾಂತಿ ಬೀಜಗಳು ಕೊಲೊನ್ ಕ್ಯಾನ್ಸರ್ ತಡೆಯಲು ಸಹಾಯಕವಾಗಿದೆ.
ಅವುಗಳಲ್ಲಿರುವ ಮ್ಯಾಂಗನೀಸ್ ಮೂಳೆಗಳನ್ನು ಬಲಿಷ್ಠಗೊಳಿಸಲು ಸಹಾಯ ಮಾಡುತ್ತದೆ.