ಬೆಂಗಳೂರು: ಎಳ್ಳೆಣ್ಣೆಯನ್ನು ನಾವು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ. ಈ ಎಣ್ಣೆ ಬಳೆಕೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. ಅವು ಯಾವುವು ಎಂದು ನೋಡೋಣ.
ಇದು ಅಧಿಕ ಒತ್ತಡವನ್ನು ನಿಯಂತ್ರಿಸುವ ಗುಣ ಹೊಂದಿದೆ. ಇದರ ಸೇವನೆಯಿಂದ ಒತ್ತಡ, ದೇಹ ತೂಕ ನಿಯಂತ್ರಣದಲ್ಲಿಡಬಹುದೆಂದು ಹಲವು ಅಧ್ಯಯನಗಳೇ ಸಾಬೀತುಪಡಿಸಿವೆ. ಅಲ್ಲದೆ ಕೊಬ್ಬು ನಿಯಂತ್ರಿಸಲೂ ಇದನ್ನು ಬಳಸಬಹುದು. ಇದು ರಕ್ತ ಹೆಪ್ಪುಗಟ್ಟುವಿಕೆ, ಅನಿಯಮಿತ ಹೃದಯ ಬಡಿತವನ್ನು ನಿಯಂತ್ರಿಸುವ ಗುಣವನ್ನೂ ಹೊಂದಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ನಿವಾರಿಸುವ ಗುಣವನ್ನೂ ಹೊಂದಿದೆ. ಇದು ವಿವಿಧ ರೀತಿಯ ಕ್ಯಾನ್ಸರ್ ತಡೆಗಟ್ಟುವ ಗುಣವನ್ನು ಹೊಂದಿದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. ಅಲ್ಲದೆ ಬೆನ್ನು, ಕೈ ಕಾಲು ನೋವಿಗೂ ಸಾಸಿವೆ ಎಣ್ಣೆ ಉಪಯುಕ್ತ.
ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಶೀತ, ಕೆಮ್ಮಿಗೂ ಸಾಸಿವೆ ಎಣ್ಣೆ ಉಪಕಾರಿ. ಮೂಗು ಕಟ್ಟಿದ್ದರೆ, ಸೈನಸ್ ಸಮಸ್ಯೆಯಿದ್ದರೆ ಎಳ್ಳೆಣ್ಣೆಯನ್ನು ಹಚ್ಚಿಕೊಳ್ಳುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ