ಬೆಂಗಳೂರು: ಅಲ್ಯುವೀರಾ ನಮ್ಮ ಮನೆಯಂಗಳದಲ್ಲೇ ಸಿಗುವ ಮದ್ದು. ಸೌಂದರ್ಯ ರಕ್ಷಣೆಯಿಂದ ಹಿಡಿದು ನಮ್ಮ ಆರೋಗ್ಯದವರೆಗೆ ಹಲವು ಉಪಯೋಗಗಳು ಇದರಿಂದ ಸಿಗುತ್ತದೆ. ಅಲ್ಯುವೀರಾ ಜ್ಯೂಸ್ ಕುಡಿಯುವುದರಿಂದ ನಮಗೆ ಸಿಗುವ ಲಾಭಗಳೇನು ಗೊತ್ತಾ?
ಅಜೀರ್ಣ ಸಮಸ್ಯೆ
ಅಜೀರ್ಣ ಸಂಬಂಧೀ ಸಮಸ್ಯೆಗಳಾದ ಮಲಬದ್ಧತೆ, ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅಲ್ಯುವೀರಾ ಜ್ಯೂಸ್ ಪ್ರತಿನಿತ್ಯ ಕುಡಿಯುವುದರಿಂದ ಪರಿಹಾರ ಸಿಗುವುದು.
ವಿಷಾಂಶ ಹೊರತೆಗೆಯುತ್ತದೆ
ದೇಹದಲ್ಲಿರುವ ವಿಷಾಂಶ ಹೊರತೆಗೆಯಲು ಅಲ್ಯುವೀರಾ ಜ್ಯೂಸ್ ನೆರವಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳಿತು.
ರಕ್ತಹೀನತೆಗೆ
ಅಜೀರ್ಣ ಸಮಸ್ಯೆಯ ಜತೆಗೆ, ರಕ್ತಹೀನತೆ, ಹಳದಿ ರೋಗ ಮುಂತಾದ ಸಮಸ್ಯೆಗಳಿಗೂ ಪ್ರತಿನಿತ್ಯ ಅಲ್ಯುವೀರಾ ಜ್ಯೂಸ್ ಕುಡಿಯುವುದು ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ.
ಹಾರ್ಮೋನಲ್ ಸಮಸ್ಯೆಗೆ
ಹಲವು ಹಾರ್ಮೋನ್ ಸಮಸ್ಯೆಗಳಿಗೆ, ಅವುಗಳಿಂದ ಬರುವ ದೇಹದ ಅಸಮತೋಲನಗಳಿಗೆ ಅಲ್ಯುವೀರಾ ಜ್ಯೂಸ್ ಸೇವನೆ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ