Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಿಟಿಕೆ ಅರಸಿನ ಪುಡಿಯೊಳಗಿದೆ ಭಯಂಕರ ಗುಟ್ಟು!

ಚಿಟಿಕೆ ಅರಸಿನ ಪುಡಿಯೊಳಗಿದೆ ಭಯಂಕರ ಗುಟ್ಟು!
Bangalore , ಶುಕ್ರವಾರ, 30 ಡಿಸೆಂಬರ್ 2016 (07:47 IST)
ಬೆಂಗಳೂರು: ನಮ್ಮ ಅಡುಗೆ ಮನೆಯಲ್ಲಿ ಇರಲೇ ಬೇಕಾದ ಮತ್ತು ಸಾಮಾನ್ಯವಾಗಿ ಇರುವ ವಸ್ತುಗಳಲ್ಲಿ ಅರಸಿನ ಪುಡಿ ಕೂಡಾ ಒಂದು. ಯಾವುದೇ ಅಡುಗೆ ಮಾಡುವಾಗಲೂ ಚಿಟಿಕೆ ಅರಸಿನ ಹಾಕದೇ ಮಾಡುವುದಿಲ್ಲ. ಹಾಗೆ ಮಾಡುವುದು ಸುಮ್ಮನೇ ಅಲ್ಲ. ಅದರ ಹಿಂದಿದೆ ಆರೋಗ್ಯಕ್ಕೆ ಲಾಭ ತರುವ ಹಲವು ಅಂಶಗಳು.

ಚಿಟಿಕೆ ಅರಸಿನ ಬೆರೆಸಿದ ಹಾಲು ಕುಡಿದರೆ ಶೀತ, ಕಫಕ್ಕೆ ಉತ್ತಮ ಎನ್ನುವುದು ನಮಗೆಲ್ಲಾ ಗೊತ್ತು. ಇದರ ಹೊರತಾಗಿಯೂ ಅರಸಿನದಲ್ಲಿ ಹಲವು ಉಪಯೋಗಗಳಿವೆ. ಅದ್ಯಾವುದೆಂದು ನೋಡೋಣ. ನಮ್ಮ ಹಿರಿಯರು ಯಾವುದೇ ಅಡುಗೆ ಮಾಡುವಾಗಲೂ ಅರಸಿನ ಬಳಸುವ ವಾಡಿಕೆ ಮಾಡಿಕೊಂಡದ್ದು, ಕೇವಲ ತರಕಾರಿ ಬೇಗ ಬೇಯುವುದಕ್ಕೆ ಮಾತ್ರವಲ್ಲ.

ಚಿಟಿಕೆ ಅರಸಿನ ಹಾಕಿ ತರಕಾರಿ ಬೇಯಿಸಿದರೆ, ಅದರಲ್ಲಿರುವ ವಿಷಕಾರಿ ಅಂಶಗಳು ನಾಶವಾಗುತ್ತದೆ ಎನ್ನುವ ಒಳಗುಟ್ಟೂ ಇದರಲ್ಲಿದೆ. ಅಲ್ಲದೆ, ತರಕಾರಿಯಲ್ಲಿರುವ ಕಹಿ ಅಂಶ ಹೋಗಲೂ ಅರಸಿನ ಬಳಸುತ್ತಾರೆ.

ಇದಲ್ಲದೆ, ಪಟಾಕಿ ಅಥವಾ ಇನ್ನಿತರ ಸುಟ್ಟ ಗಾಯ ಸೋರುತ್ತಿದ್ದರೆ, ಎಷ್ಟು ದಿನವಾದರೂ ಮಾಗದಿದ್ದರೆ ಹಳೇ ಕಾಲದವರು ಇದನ್ನೇ ಔಷಧವಾಗಿ ಬಳಸುತ್ತಿದ್ದರು.  ಅರಸಿನ ಪುಡಿಯನ್ನು ಸ್ವಲ್ಪ ಬಾಡಿಸಿ, ಅದಕ್ಕೆ ಎಣ್ಣೆ ಬೆರೆಸಿ ಸುಟ್ಟ ಗಾಯಕ್ಕೆ ಹಚ್ಚಿದರೆ ಬೇಗನೇ ನಿವಾರಣೆಯಾಗುತ್ತದೆ. ಆಗಾಗ ಕುಕ್ಕರ್ ಕೈಗೆ ತಗುಲಿಸಿಕೊಂಡು ಗಾಯ ಮಾಡಿಕೊಳ್ಳುವ ಗೃಹಿಣಿಯರಿಗೆ ಇದು ಉತ್ತಮ ಔಷಧ.

ಮಲೆನಾಡಿನ ಪ್ರದೇಶದಲ್ಲಿರುವವರಿಗೆ ಮಳೆಗಾಲದಲ್ಲಿ ಕಾಲು ಹುಳ ಕೆರೆಯುವ ಸಮಸ್ಯೆ ಇರುತ್ತದೆ. ನೀರಿನಲ್ಲಿ ಹೆಚ್ಚು ಕೆಲಸ ಮಾಡುವವರಿಗೆ ಕಾಲು ಕೀವು ಬರುವುದು ಸಹಜ. ಇಂತಹ ಕೀವಿಗೆ ಅರಸಿನ ಬಾಡಿಸಿ ಎಣ್ಣೆಯೊಂದಿಗೆ ಹಚ್ಚುವುದು ಉತ್ತಮ ಮನೆ ಔಷಧ. ಇನ್ನು ಚೇಳು, ಹುಳ ಹುಪ್ಪಟೆಗಳು ಕಚ್ಚಿ ಊತ ಬರುವುದಕ್ಕೂ ಅರಸಿನ ಹಚ್ಚಬಹುದು.

ಮುತ್ತೈದಯರು ಅರಸಿನ ಕಾಲಿಗೆ ಹಚ್ಚಿಕೊಳ್ಳುವುದರ ಮರ್ಮವೂ ಇದೇ ಇರಬೇಕು. ಹಿರಿಯರು ಸುಮ್ಮನೇ ಪದ್ಧತಿ ರೂಢಿಸಿಕೊಳ್ಳುವುದಿಲ್ಲ ಎನ್ನುವುದು ಇದಕ್ಕೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಬೆಂಗಳೂರು: ನಮ್ಮ ಅಡುಗೆ ಮನೆಯಲ್ಲಿ ಇರಲೇ ಬೇಕಾದ ಮತ್ತು ಸಾಮಾನ್ಯವಾಗಿ ಇರುವ ವಸ್ತುಗಳಲ್ಲಿ ಅರಸಿನ ಪುಡಿ ಕೂಡಾ ಒಂದು. ಯಾವುದೇ ಅಡುಗೆ ಮಾಡುವಾಗಲೂ ಚಿಟಿಕೆ ಅರಸಿನ ಹಾಕದೇ ಮಾಡುವುದಿಲ್ಲ. ಹಾಗೆ ಮಾಡುವುದು ಸುಮ್ಮನೇ ಅಲ್ಲ. ಅದರ ಹಿಂದಿದೆ ಆರೋಗ್ಯಕ್ಕೆ ಲಾಭ ತರುವ ಹಲವು ಅಂಶಗಳು.

ಚಿಟಿಕೆ ಅರಸಿನ ಬೆರೆಸಿದ ಹಾಲು ಕುಡಿದರೆ ಶೀತ, ಕಫಕ್ಕೆ ಉತ್ತಮ ಎನ್ನುವುದು ನಮಗೆಲ್ಲಾ ಗೊತ್ತು. ಇದರ ಹೊರತಾಗಿಯೂ ಅರಸಿನದಲ್ಲಿ ಹಲವು ಉಪಯೋಗಗಳಿವೆ. ಅದ್ಯಾವುದೆಂದು ನೋಡೋಣ. ನಮ್ಮ ಹಿರಿಯರು ಯಾವುದೇ ಅಡುಗೆ ಮಾಡುವಾಗಲೂ ಅರಸಿನ ಬಳಸುವ ವಾಡಿಕೆ ಮಾಡಿಕೊಂಡದ್ದು, ಕೇವಲ ತರಕಾರಿ ಬೇಗ ಬೇಯುವುದಕ್ಕೆ ಮಾತ್ರವಲ್ಲ.

ಚಿಟಿಕೆ ಅರಸಿನ ಹಾಕಿ ತರಕಾರಿ ಬೇಯಿಸಿದರೆ, ಅದರಲ್ಲಿರುವ ವಿಷಕಾರಿ ಅಂಶಗಳು ನಾಶವಾಗುತ್ತದೆ ಎನ್ನುವ ಒಳಗುಟ್ಟೂ ಇದರಲ್ಲಿದೆ. ಅಲ್ಲದೆ, ತರಕಾರಿಯಲ್ಲಿರುವ ಕಹಿ ಅಂಶ ಹೋಗಲೂ ಅರಸಿನ ಬಳಸುತ್ತಾರೆ.

ಇದಲ್ಲದೆ, ಪಟಾಕಿ ಅಥವಾ ಇನ್ನಿತರ ಸುಟ್ಟ ಗಾಯ ಸೋರುತ್ತಿದ್ದರೆ, ಎಷ್ಟು ದಿನವಾದರೂ ಮಾಗದಿದ್ದರೆ ಹಳೇ ಕಾಲದವರು ಇದನ್ನೇ ಔಷಧವಾಗಿ ಬಳಸುತ್ತಿದ್ದರು.  ಅರಸಿನ ಪುಡಿಯನ್ನು ಸ್ವಲ್ಪ ಬಾಡಿಸಿ, ಅದಕ್ಕೆ ಎಣ್ಣೆ ಬೆರೆಸಿ ಸುಟ್ಟ ಗಾಯಕ್ಕೆ ಹಚ್ಚಿದರೆ ಬೇಗನೇ ನಿವಾರಣೆಯಾಗುತ್ತದೆ. ಆಗಾಗ ಕುಕ್ಕರ್ ಕೈಗೆ ತಗುಲಿಸಿಕೊಂಡು ಗಾಯ ಮಾಡಿಕೊಳ್ಳುವ ಗೃಹಿಣಿಯರಿಗೆ ಇದು ಉತ್ತಮ ಔಷಧ.

ಮಲೆನಾಡಿನ ಪ್ರದೇಶದಲ್ಲಿರುವವರಿಗೆ ಮಳೆಗಾಲದಲ್ಲಿ ಕಾಲು ಹುಳ ಕೆರೆಯುವ ಸಮಸ್ಯೆ ಇರುತ್ತದೆ. ನೀರಿನಲ್ಲಿ ಹೆಚ್ಚು ಕೆಲಸ ಮಾಡುವವರಿಗೆ ಕಾಲು ಕೀವು ಬರುವುದು ಸಹಜ. ಇಂತಹ ಕೀವಿಗೆ ಅರಸಿನ ಬಾಡಿಸಿ ಎಣ್ಣೆಯೊಂದಿಗೆ ಹಚ್ಚುವುದು ಉತ್ತಮ ಮನೆ ಔಷಧ. ಇನ್ನು ಚೇಳು, ಹುಳ ಹುಪ್ಪಟೆಗಳು ಕಚ್ಚಿ ಊತ ಬರುವುದಕ್ಕೂ ಅರಸಿನ ಹಚ್ಚಬಹುದು.

ಮುತ್ತೈದಯರು ಅರಸಿನ ಕಾಲಿಗೆ ಹಚ್ಚಿಕೊಳ್ಳುವುದರ ಮರ್ಮವೂ ಇದೇ ಇರಬೇಕು. ಹಿರಿಯರು ಸುಮ್ಮನೇ ಪದ್ಧತಿ ರೂಢಿಸಿಕೊಳ್ಳುವುದಿಲ್ಲ ಎನ್ನುವುದು ಇದಕ್ಕೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾದ ಚಕ್ಕುಲಿ ಮಾಡಲು ಬಾಳೆಕಾಯಿಯೂ ಸಾಕು