ಬೆಂಗಳೂರು: ತಲೆನೋವಿರಲಿ, ಮೈ ಕೈ ನೋವಿರಲಿ ವೈದ್ಯರು ಸೂಚಿಸುವ ಔಷಧವೆಂದರೆ ಪ್ಯಾರಾಸಿಟಮಲ್ ಗುಳಿಗೆ. ಆದರೆ ನೋವು ನಿವಾರಕವಾಗಿ ಪ್ಯಾರಾಸಿಟಮಲ್ ನ್ನೇ ಬಳಸಬೇಕಾಗಿಲ್ಲ.
ಅದರ ಬದಲಿಗೆ ಬೀರ್ ಬಳಸಬಹುದು ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. ಜಾಸ್ತಿ ಹಾನಿಕಾರಕವಲ್ಲದ ಬೀರ್ ಪಾನಪ್ರಿಯರ ಮೆಚ್ಚಿನ ಆಯ್ಕೆ. ಇದನ್ನು ನೋವು ನಿವಾರಕವಾಗಿಯೂ ಬಳಸಬಹುದು ಎಂದು ಅಧ್ಯಯನಕಾರರು ಹೇಳಿದ್ದಾರೆ.
ಲಂಡನ್ ನ ಗ್ರೀನ್ ವಿಚ್ ವಿವಿಯ ಸಂಶೋಧಕರು ಈ ಸತ್ಯ ಕಂಡುಕೊಂಡಿದ್ದಾರೆ. ಸುಮಾರು 400 ಮಂದಿ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಬೀರ್ ಕುಡಿಯುವುದರಿಂದ ಸಂವೇದನೆ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಕೊಳ್ಳಲಾಯಿತು.
ಆ ಮೂಲಕ ಹೆಚ್ಚು ಬೀರ್ ಕುಡಿದವರಿಗೆ ನೋವೂ ಹೆಚ್ಚು ಎಂದು ತಿಳಿದುಬಂದಿದೆ. ಹಾಗಾಗಿ ಮೈ ಕೈ ನೋವು ಎಂದರೆ ಗುಳಿಗೆ ನುಂಗಬೇಕಾಗಿಲ್ಲ. ಬೀರ್ ಕುಡಿದರೆ ಸಾಕು ಎನ್ನುತ್ತಾರೆ ಸಂಶೋಧಕರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ