ಬೆಂಗಳೂರು : ತಿಂಡಿಗಳನ್ನು ಕರಿಯಲು ನಾವು ಎಣ್ಣೆ ಕಾಯಿಸುತ್ತೇವೆ. ಆದರೆ ಆ ವೇಳೆ ಎಣ್ಣೆ ಕಾದಿದೆಯೇ? ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಲು ಈ ಟ್ರಿಕ್ ಫಾಲೋ ಮಾಡಿ.
ಕಾದ ಎಣ್ಣೆಯಲ್ಲಿ ಕರಿದರೆ ಮಾತ್ರ ತಿಂಡಿ ರುಚಿಕರವಾಗಿರುತ್ತದೆ. ಆದಕಾರಣ ಎಣ್ಣೆ ಕಾದಿದೆಯೇ ಎಂದು ನೋಡಲು ಕೆಲವರು ನೀರನ್ನು ಹಾಕುತ್ತಾರೆ. ಆದರೆ ಇದರಿಂದ ಎಣ್ಣೆ ನಿಮ್ಮ ಮೇಲೆ ಸಿಡಿಯುವ ಸಂಭವವಿರುತ್ತದೆ. ಆದಕಾರಣ ಒಂದು ಮರದ ಸ್ಪೂನ್ ನ್ನು ಎಣ್ಣೆಯಲ್ಲಿ ಹಾಕಿದರೆ ಗುಳ್ಳೆಗಳು ಬಂದರೆ ಎಣ್ಣೆ ಕಾದಿದೆ ಎಂದರ್ಥ.