ಬೆಂಗಳೂರು : ಉಗುರುಗಳು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಲ್ಲಿ ಉಗುರುಗಳು ಚೆನ್ನಾಗಿ ಬೆಳೆಯುವುದಿಲ್ಲ. ಒಂದು ವೇಳೆ ಬೆಳೆದರೂ ಬೇಗ ತುಂಡಾಗುತ್ತದೆ. ಅಂತವರು ಟೊಮೆಟೊ ಹಣ್ಣನ್ನು ಬಳಸಿ ತಮ್ಮ ಉಗುರುಗಳನ್ನು ಉದ್ದವಾಗಿ, ಗಟ್ಟಿಯಾಗಿ ಬೆಳೆಸಬಹುದು.
ಟೊಮೆಟೊ ಹಣ್ಣಿನಲ್ಲಿ ಲೆಕೊಪಿನ್ ಮತ್ತು ಬಯುಟಿನ್ ಎಂಬ ಅಂಶವು ಹೇರಳವಾಗಿದೆ. ಇದು ಉಗುರುಗಳು ಚೆನ್ನಾಗಿ ಬೆಳೆಯಲು ಸಹಕಾರಿಯಾಗಿದೆ. ಹಣ್ಣಾದ ಟೊಮೆಟೊವನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಆಲಿವ್ ಆಯಿಲ್ ಅನ್ನು ಮಿಕ್ಸ್ ಮಾಡಿ ನಂತರ ಕೈ ಬೆರಳುಗಳನ್ನು ಅದರಲ್ಲಿ 15 ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಬೇಕು. ಬಳಿಕ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಮಾಡುತ್ತಾ ಬಂದರೆ ಉಗುರುಗಳು ಉದ್ದವಾಗಿ, ಅಂದವಾಗಿ, ಗಟ್ಟಿಯಾಗಿ ಬೆಳೆಯುತ್ತವೆ.