ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಿನವರು ತುಂಬಾ ಹೊತ್ತು ನಿದ್ರೆ ಮಾಡುತ್ತಾರೆ. ಬೇಗ ಏದ್ದೇಳಬೇಕೆಂದರು ಅವರಗೆ ಏಳಲು ಮನಸ್ಸೇ ಆಗುವುದಿಲ್ಲ. ಹಾಗಾಗಿ ನಿಮಗೆ ಚಳಿಗಾಲದಲ್ಲಿ ಬೇಗನೆ ಎದ್ದೇಳಬೇಕೆಂದರೆ ಈ ನಿಯಮಗಳನ್ನು ಪಾಲಿಸಿ.
-ರಾತ್ರಿಯಲ್ಲಿ ಮಲಗುವ ಮೊದಲು ನೀರು ಕುಡಿಯಿರಿ ಮತ್ತು ಬೆಳಿಗ್ಗೆ ಎದ್ದ ಕೂಡಲೇ ಅದು ದೇಹವನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ.
-ಪ್ರತಿದಿನ ವ್ಯಾಯಮಗಳನ್ನು ಮಾಡಿ. ಇದು ದೇಹದ ದಿನಚರಿಯನ್ನು ಹೊಂದಿಸಲು ಸಹಾಯ ಮಾಡುತ್ತದೆ.
-ಕೆಲವು ದಿನಗಳವರೆಗೆ ನಿರಂತರವಾಗಿ ಒಂದೇ ಸಮಯದಲ್ಲಿ ನಿದ್ರೆ ಮತ್ತು ಎಚ್ಚರಗೊಳ್ಳುವ ಮೂಲಕ ದೇಹದ ಗಡಿಯಾರವನ್ನು ಹೊಂದಿಸಲು ಪ್ರಯತ್ನಿಸಿ.
-ಹಾಸಿಗೆಯಿಂದ ಎದ್ದ ನಂತರ ಸ್ನಾನ ಮಾಡಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಬದಲಾಯಿಸುತ್ತದೆ ಮತ್ತು ನಿಮ್ಮನ್ನ ಸಕ್ರಿಯಗೊಳಿಸುತ್ತದೆ.
-ಸೋಮಾರಿತನವನ್ನು ತಪ್ಪಿಸಲು, ಆರೋಗ್ಯಕರವಾದ ಮತ್ತು ಲಘು ಆಹಾರವನ್ನು ಸೇವಿಸಿ.