ಬೆಂಗಳೂರು: ಮಹಿಳೆಯರು ವಯಸ್ಸಾದಂತೆ ಹೆಚ್ಚು ಭಾವನಾತ್ಮಕವಾಗಿ ಯೋಚಿಸುತ್ತಾರೆ. ಇವರಲ್ಲಿ ಒತ್ತಡಗಳಿಂದಾಗಿ ಬರುವ ಹೃದಯದ ಖಾಯಿಲೆಯ ಸಂಭವವೂ ಹೆಚ್ಚು. ಇದಕ್ಕೆ ಇಂದಿನ ಜೀವನ ಶೈಲಿಯೂ ಕಾರಣ. ಹಾಗಾಗಿ ಗುಂಡಿಗೆ ಗಟ್ಟಿ ಮಾಡುವಂತಹ ಐದು ಸೂತ್ರಗಳು ಯಾವುವು ನೋಡೋಣ.
*ಮುಟ್ಟು ನಿಂತ ಮೆಲೆ ಆರಂಭದ 10 ವರ್ಷಗಳು ತುಂಬಾ ಸೂಕ್ಷ್ಮ ದಿನಗಳು. ಈ ಸಂದರ್ಭದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯ ಏರು ಪೇರಾಗುವುದೂ ಇದೆ. ಹೀಗಾಗಿ ಈ ಸಮಯದಲ್ಲಿ ಒತ್ತಡದ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಅದರಲ್ಲೂ ಬೊಜ್ಜು, ಹೃದಯ ಖಾಯಿಲೆ ವಂಶಪಾರಂಪರ್ಯವಾಗಿರುವ ಮಹಿಳೆಯರು ಈ ಪರೀಕ್ಷೆಗೊಳಪಡಬೇಕು.
*ಯೋಗ, ವ್ಯಾಯಾಮದ ಮೂಲಕ ಭಾವನೆಗಳನ್ನು ನಿಯಂತ್ರಿಸಲು ಕಲಿಯಿರಿ. ಸಂಗೀತ ಕೇಳುವುದು, ಇಷ್ಟದ ಸಾಹಿತ್ಯ ಓದುವುದರ ಮೂಲಕ ಮನಸ್ಸನ್ನು ಹತೋಟಿಯಲ್ಲಿಡುವುದು ಮುಖ್ಯ.
*ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಹೃದಯಾಘಾತದ ಲಕ್ಷಣಗಳು ವ್ಯತ್ಯಸ್ಥವಾಗಿರಬಹುದು. ಅದನ್ನು ತಿಳಿದುಕೊಳ್ಳಿ.
*ಮದ್ಯಪಾನಿಗಳಾಗಿದ್ದರೆ, ಅದನ್ನು ಬಿಡಿ. ಕೊಲೆಸ್ಟ್ರೋಲ್ ಕಡಿಮೆ ಮಾಡುತ್ತದೆ ಎನ್ನುವ ಕಾರಣಕ್ಕೆ ಮದ್ಯ ಸೇವಿಸುವವರು ಅದು ಹೃದಯ ಬಡಿತ, ಮುಂತಾದ ಗಂಭೀರ ಖಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು.
*ವಿಮಾನ ಪ್ರಯಾಣ ಮಾಡುವವರಾಗಿದ್ದರೆ, ಅಂತಹ ಸಂದರ್ಭಗಳಲ್ಲಿ ಸಾಕಷ್ಟು ನೀರು ಕುಡಿಯಿರಿ ಮತ್ತು ಕಾಲು ಒಂದೇ ಕಡೆ ಇಟ್ಟುಕೊಂಡು ರಕ್ತ ಹೆಪ್ಪುಗಟ್ಟುವಂತೆ ಮಾಡಬೇಡಿ. ಆದಷ್ಟು ಕುಳಿತಲ್ಲಿಯೇ ಕಾಲುಗಳನ್ನು ಅತ್ತಿತ್ತ ಅಲುಗಾಡಿಸುತ್ತಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ