ಬೆಂಗಳೂರು : ಇತ್ತೀಚಿನ ಜೀವನ ಶೈಲಿಯಿಂದ ಜನರ ತೂಕ ಹೆಚ್ಚಾಗುತ್ತಿದ್ದು, ಅದನ್ನುಇಳಿಸಲು ಕೆಲವರು ಹರಸಾಹಸ ಪಡುತ್ತಾರೆ, ಅದಕ್ಕಾಗಿ ವ್ಯಾಯಾಮ, ಡೆಯೆಟ್ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ತೂಕ ಇಳಿಸಲು ನಿಂಬೆ ಹಣ್ಣನ್ನು ಹೆಚ್ಚಾಗಿ ಬೆಳೆಸುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ನಿಂಬೆ ನೀರನ್ನು ಅತಿ ಹೆಚ್ಚು ಸೇವನೆ ಮಾಡುವುದರಿಂದ ದೇಹದಲ್ಲಿ ವಿಟಮಿನ್ ಸಿ ಹೆಚ್ಚಾಗುತ್ತದೆ. ಇದರಿಂದ ಎಸಿಡಿಟಿ ಸಮಸ್ಯೆ ಕಾಡುತ್ತದೆ. ಪ್ರತಿದಿನ ಎರಡು ಕಪ್ ಗಿಂತ ಹೆಚ್ಚು ನಿಂಬೆ ನೀರಿನ ಸೇವನೆ ಮಾಡಬಾರದಂತೆ. ನಿಂಬೆ ಹಣ್ಣಿನಲ್ಲಿ ಸಿಟ್ರಸ್ ಆಮ್ಲವಿರುತ್ತದೆ. ಅದು ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ.
ನಿಂಬೆ ನೀರಿನಲ್ಲಿ ಆಕ್ಸ್ಲೆಟ್ ಅಂಶ ಹೆಚ್ಚಿರುವುದರಿಂದ ನಿಂಬೆ ನೀರನ್ನು ಅತಿ ಹೆಚ್ಚು ಸೇವನೆ ಮಾಡುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದು ದೇಹದಲ್ಲಿ ಕ್ರಿಸ್ಟಲ್ ಉತ್ಪಾದನೆಗೆ ಕಾರಣವಾಗುತ್ತದೆ. ಇದರಿಂದ ಕಲ್ಲು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ.