ಬೆಂಗಳೂರು : ಹೆರಿಗೆ ಆದ ಮೇಲೆ ಬಾಣಂತಿಯರ ಕೂದಲು ಉದುರಲಾಂರಂಭಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಬೇಕೆಂದರೆ ತಲೆಸ್ನಾನ ಮಾಡುವಾಗ ಇದನ್ನು ಬಳಸಿ.
ಮೂರು ಚಮಚ ಆಲೀವ್ ಎಣ್ಣೆಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಕೂದಲಿಗೆ ಹಚ್ಚಿ ಸ್ನಾನಮಾಡಿ ಇದರಿಂದ ಫಲಿತಾಂಶ ಸಿಗುತ್ತದೆ.
ಕೂದಲು ಉದುರುವಿಕೆ ತಡೆಯುವಲ್ಲಿ ಮೆಂತೆ ಕಾಳು ಹೆಚ್ಚು ಕೆಲಸ ಮಾಡುತ್ತದೆ. ಮೆಂತೆಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ ಈ ನೀರನ್ನು ಕೂದಲಿಗೆ ಮರುದಿನ ಬೆಳಗ್ಗೆ ಹಚ್ಚಿ ಇದನ್ನು ಎರಡು ಗಂಟೆಗಳ ಕಾಲ ಹಾಗೆಯೇ ಬಿಡಿ. ಮೊಸರನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದಲೂ ಕೂದಲೂದುರುವ ಸಮಸ್ಯೆ ಪರಿಹಾರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.