ಬೆಂಗಳೂರು: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಮಧುಮೇಹಿಗಳಂತೂ ಮದ್ಯಪಾನ ಮಾಡಿದರೆ ಈ ಅಪಾಯ ಗ್ಯಾರಂಟಿ! ಅದೇನದು ನೋಡೋಣ.
ಮಧುಮೇಹಿಗಳು ಮದ್ಯಪಾನ ಮಾಡುವುದರಿಂದ ಅವರ ಬ್ಲಡ್ ಶುಗರ್ ಲೆವೆಲ್ ಹೆಚ್ಚು ಕಮ್ಮಿಯಾಗುವ ಸಾಧ್ಯತೆಯಿದೆ. ಮದ್ಯದಿಂದ ರಕ್ತದಲ್ಲಿ ಮಧುಮೇಹದ ಅಂಶ ಕಡಿಮೆಯಾಗುವ ಅಥವಾ ಹೆಚ್ಚಾಗುವ ಸಾಧ್ಯತೆಯಿದೆ.
ಇದರಿಂದಾಗಿ ಕಾಲು ಮತ್ತು ಕೈಗಳ ನರಕ್ಕೆ ಹಾನಿಯಾಗಬಹುದು. ಅಷ್ಟೇ ಅಲ್ಲದೆ, ಯೂರಿಕ್ ಆಸಿಡ್ ಅಂಶ ಹೆಚ್ಚಳ, ರಕ್ತದೊತ್ತಡದಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಿದ್ದರೂ ಮದ್ಯಪಾನ ಮಾಡದೇ ಮನಸ್ಸು ಕೇಳುವುದೇ ಇಲ್ಲವೆಂದರೆ ವಾರಕ್ಕೆ 60 ಎಂಎಲ್ ಗಿಂತ ಹೆಚ್ಚು ಮದ್ಯ ಸೇವಿಸಬೇಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ