Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಈ ಸೊಪ್ಪನ್ನು ಸೇವಿಸಿ

ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಈ ಸೊಪ್ಪನ್ನು ಸೇವಿಸಿ
ಬೆಂಗಳೂರು , ಬುಧವಾರ, 17 ಫೆಬ್ರವರಿ 2021 (06:46 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ವಾತಾವರಣದ ಧೂಳು, ಕೊಳೆ ಒಂದು ಕಾರಣವಾದರೆ ಕೂದಲಿನ ಬುಡಕ್ಕೆ ಕಬ್ಬಿಣಾಂಶದ ಕೊರತೆ ಇನ್ನೊಂದು ಕಾರಣವಾಗಿದೆ. ಹಾಗಾಗಿ ಈ ಕೂದಲಿನ ಬುಡವನ್ನು ಗಟ್ಟಿಗೊಳಿಸಲು ಈ ಸೊಪ್ಪನ್ನು ಸೇವಿಸಿ.

ಪಾಲಕ್ ಸೊಪ್ಪು ಅತ್ಯಧಿಕ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದರಲ್ಲಿ  ವಿಟಮಿನ್,  ಪ್ರೋಟೀನ್, ಕಬ್ಬಿಣದ ಅಂಶಗಳು ಹೇರಳವಾಗಿದೆ. ಇದನ್ನು ವಾರದಲ್ಲಿ 3 ಬಾರಿ ಬಳಸಿದರೆ ಆರೋಗ್ಯಕ್ಕೆ ಉತ್ತಮ. ಇದು ಸೋರಿಯಾಸಿಸ್, ಒಣತ್ವಚೆ ಮತ್ತು ತುರಿಕೆಗಳನ್ನು ಕಡಿಮೆ ಮಾಡುತ್ತದೆ.

ಹಾಗೇ ಇದರಲ್ಲಿರುವ  ವಿಟಮಿನ್ ಬಿ, ಸಿ, ಇ ಪೊಷ್ಟಿಕಾಂಶ ಕೂದಲಿನ ಬೆಳವಣೆಗೆಗೆ ಉತ್ತಮ. ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣಾಂಶ ಕೆಂಪುರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಕೂದಲಿನ ಬುಡಕ್ಕೆ ಸಾಗಿಸಲು ಸಹಕಾರಿಯಾಗಿದೆ. ಇದರಂದ ಕೂದಲುದುರುವ ಸಮಸ್ಯೆ ದೂರವಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಊಟವಾದ ಬಳಿಕ ನೀರು ಕುಡಿದರೆ ಮಧುಮೇಹ ಸಮಸ್ಯೆ ಉಂಟಾಗುತ್ತದೆಯೇ?