ಬೆಂಗಳೂರು: ಹಳದಿ ಹಲ್ಲು ಹೇಗೆ ಬಿಳಿಯಾಗಿಸೋದು. ಬೆಳ್ಳಗಿನ ಹಲ್ಲನ್ನು ಹೇಗೆ ಮೈನ್ ಟೇನ್ ಮಾಡೋದು ಎಂಬ ಚಿಂತೆಯೇ? ಹಾಗಿದ್ದರೆ ಇವೇ ಮೊದಲಾದ ಕೆಲವು ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ!
ಆಪಲ್
ಆಪಲ್ ಹಣ್ಣಿನಲ್ಲಿರುವ ನಾರಿನಂಶ ಹಲ್ಲಿನ ಕೊಳೆಯನ್ನು ನಿವಾರಿಸುತ್ತದೆ. ಇದರಲ್ಲಿರುವ ಮಾಲಿಕ್ ಆಸಿಡ್ ಅಂಶ ಹೆಚ್ಚು ಜೊಲ್ಲು ರಸ ಉತ್ಪಾದನೆಯಾಗುವಂತೆ ಮಾಡುತ್ತದೆ. ಇದರಿಂದ ಹಲ್ಲಿನ ನಡುವೆ ಸಿಲುಕಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ.
ಕ್ಯಾರೆಟ್
ಹಸಿ ಕ್ಯಾರೆಟ್ ತಿನ್ನುವಾಗ ನಿಮ್ಮ ಹಲ್ಲಿಗೆ ಹೆಚ್ಚಿನ ವ್ಯಾಯಾಮ ಸಿಗುತ್ತದೆ. ಹೆಚ್ಚು ಶ್ರಮದ ಆಹಾರ ತಿನ್ನುವಾಗ ಹೆಚ್ಚು ಜೊಲ್ಲು ರಸ ಉತ್ಪಾದನೆಯಾಗುತ್ತದೆ. ಇದರಿಂದ ನಿಮ್ಮ ಹಲ್ಲಿನಲ್ಲಿ ಕೊಳೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ.
ಬಸಳೆ ಸೊಪ್ಪು
ಮುತ್ತಿನಂತಹ ಸುಂದರ ಹಲ್ಲು ಬೇಕಾದರೆ ಆದಷ್ಟು ಸೊಪ್ಪು ತರಕಾರಿ ಸೇವಿಸಬೇಕು. ಬಸಳೆ ಸೊಪ್ಪಿನಂತಹ ಸೊಪ್ಪು ತರಕಾರಿಗಳಲ್ಲಿರುವ ಕಬ್ಬಿಣದಂಶ ಹಲ್ಲನ್ನು ಬಿಳುಪಾಗಿಸುವ ಶಕ್ತಿ ಹೊಂದಿದೆ.
ಇದಲ್ಲದೆ, ಆದಷ್ಟು ಒಣ ಹಣ್ಣು, ನಾರಿನಂಶಗಳಿರುವ ಆಹಾರಗಳು, ಖರ್ಜೂರದಂತಹ ಆಹಾರಗಳು ಹಲ್ಲನ್ನು ಬಿಳಿಯಾಗಿಸುವ ಶಕ್ತಿ ಹೊಂದಿದೆ. ಹಾಗಾಗಿ ಅಂತಹ ಆಹಾರಗಳನ್ನು ಆದಷ್ಟು ಸೇವಿಸಿ ಸುಂದರ ಬಿಳಿಯಾದ ಹಲ್ಲು ನಿಮ್ಮದಾಗಿಸಿ.