ಬೆಂಗಳೂರು : ದೇಹ ಆರೋಗ್ಯವಾಗಿರಲು ನಮ್ಮ ಲಿವರ್ ಕೂಡ ಸರಿಯಾಗಿ ಕೆಲಸ ಮಾಡಬೇಕು. ಆದ್ದರಿಂದ ಲಿವರ್ ನ ಆರೋಗ್ಯ ಬಹಳ ಮುಖ್ಯ. ಇವುಗಳನ್ನು ಸೇವಿಸಿದರೆ ಲಿವರ್ ಆರೋಗ್ಯವಾಗಿರುತ್ತದೆ.
*ಜೀರಿಗೆ ಲಿವರ್ ನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ಪಿತ್ತರಸ ಮತ್ತು ಇತರ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
*ಅರಶಿನ ಲಿವರ್ ಆರೋಗ್ಯಕ್ಕೆ ಉತ್ತಮ. ಇದು ಹೈಪಟೈಟಿಸ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.