ಬೆಂಗಳೂರು: ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಸಹಜ ಸ್ಥಿತಿಯಲ್ಲಿರಲೇಬೇಕು. ಇಲ್ಲದಿದ್ದರೆ ಅನಿಮೀಯಾ, ಸುಸ್ತು, ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಬರುತ್ತವೆ. ಹಾಗಿದ್ದರೆ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವ ಆಹಾರಗಳು ಯಾವುವು?
ಕಬ್ಬಿಣದಂಶ ಹೆಚ್ಚಿರುವ ಆಹಾರ
ಪ್ರತಿನಿತ್ಯ ಕಬ್ಬಿಣದಂಶ ಹೇರಳವಾಗಿರುವ ಹಣ್ಣು ಹಂಪಲುಗಳನ್ನು ಸೇವಿಸಿ. ಸಿಹಿಗುಂಬಳದ ಬೀಜ, ಸೊಪ್ಪು ತರಕಾರಿ, ಬಟಾಣಿ, ಮೀನು, ಬಾದಾಮಿ, ಮಾಂಸಾಹಾರಗಳಲ್ಲಿ ಕಬ್ಬಿಣದಂಶ ಹೆಚ್ಚಿರುತ್ತದೆ.
ವಿಟಮಿನ್ ಸಿ ಆಹಾರಗಳು
ಕಿತ್ತಳೆ, ನಿಂಬೆ ಹಣ್ಣು, ಸ್ಟ್ರಾಬೆರಿ, ಪಪ್ಪಾಯದಂತಹ ಹಣ್ಣು ಹಂಪಲುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ. ಇದು ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುವುದಲ್ಲದೆ, ಹಿಮೋಗ್ಲೋಬಿನ್ ಅಂಶ ಹೆಚ್ಚಲು ಕಾರಣವಾಗುತ್ತದೆ.
ಫೋಲಿಕ್ ಆಸಿಡ್ ಅಂಶ
ಕೆಂಪು ರಕ್ತಕಣಗಳ ಅಭಿವೃದ್ಧಿಗೆ ವಿಟಮಿನ್ ಬಿ ಅಗತ್ಯ. ಅಲ್ಲದೆ ಫೋಲಿಕ್ ಆಸಿಡ್ ಅಂಶ ಕಡಿಮೆಯಾದೊಡನೆ ಹಿಮೋಗ್ಲೋಬಿನ್ ಅಂಶವೂ ಕಡಿಮೆಯಾಗುವುದು. ಇದನ್ನು ಸುಧಾರಿಸುವುದಕ್ಕೆ ತಕ್ಕ ತರಕಾರಿಯೆಂದರೆ ಬೀಟ್ ರೂಟ್.
ಆಪಲ್ ಮತ್ತು ದಾಳಿಂಬೆ
ಆಪಲ್ ನಲ್ಲಿ ಆರೋಗ್ಯಕ್ಕೆ ಬೇಕಾದ ಎಲ್ಲಾ ಒಳ್ಳೆಯ ಅಂಶಗಳೂ ಇವೆ. ಹಿಮೋಗ್ಲೋಬಿನ್ ಅಂಶ ಹೆಚ್ಚುವಂತಹ ಎಲ್ಲಾ ಅಂಶಗಳೂ ಆಪಲ್ ನಲ್ಲಿವೆ. ದ
ದಾಳಿಂಬೆಯಲ್ಲಿ ಕಬ್ಬಿಣದಂಶ, ಫೈಬರ್, ಕ್ಯಾಲ್ಶಿಯಂ ಹೇರಳವಾಗಿದೆ. ಹಾಗಾಗಿ ಶರೀರದಲ್ಲಿ ಹಿಮೋಗ್ಲೋಬಿನ್ ಅಂಶ ಸುಧಾರಿಸುತ್ತದೆ.