ಬೆಂಗಳೂರು: ಸೊಪ್ಪುಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ಅದರಲ್ಲೂ ಪಾಲಕ್ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳು ಇರುತ್ತದೆ. ,ಇದು ಕಬ್ಬಿಣದಂಶ ಹಾಗೂ ಜೀವಸತ್ವಗಳ ಆಗರವಾಗಿದೆ. ಅಲ್ಲದೇ ಕೆಲವೊಂದು ರೋಗಗಳನ್ನೂ ಗುಣಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
* ಸಾಮಾನ್ಯವಾಗಿ ಉಂಟಾಗಬಹುದಾದ ದೃಷ್ಠಿದೋಷವನ್ನು ತಡೆಗಟ್ಟುವಲ್ಲಿ ಪಾಲಕ್ ಸೊಪ್ಪು ನೆರವಾಗುತ್ತದೆ.
* ಪಾಲಕ್ ಸೊಪ್ಪು ಫ್ರೋಲೆಟ್ ಅಂಶವನ್ನು ಹೊಂದಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಇತರೆ ಹೃದಯ ಸಂಬಂಧಿ ಖಾಯಿಲೆಗಳನ್ನು ನಿವಾರಿಸುತ್ತದೆ.
* ಪಾಲಕ್ ಸೇವನೆಯು ಮೊಡವೆಗಳನ್ನು ಹೋಗಲಾಡಿಸುವುದೇ ಅಲ್ಲದೇ ಮುಖದಲ್ಲಿ ಬೇಗನೇ ನೆರಿಗೆ ಮೂಡದಂತೆ ಕಾಪಾಡುತ್ತದೆ.
* ಮೆದುಳಿನ ನರಕೋಶಗಳ ಅಭಿವೃದ್ಧಿಗೆ ಸಹಾಯಕವಾಗಬಲ್ಲ ಪೋಷಕಾಂಶಗಳು ಪಾಲಕ್ ಸೊಪ್ಪಿನಲ್ಲಿರುವುದರಿಂದ ಅದರ ಸೇವನೆಯು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲದು.
* ದಿನನಿತ್ಯ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದಂಶದಿಂದಾಗಿ ನಮ್ಮ ರಕ್ತಕಣಗಳು ವೃದ್ಧಿಯಾಗಿ ರಕ್ತಹೀನತೆಯನ್ನು ದೂರವಿಡಬಹುದು.
* ಬಿಸಿಲಿನ ತಾಪದಿಂದಾಗಿ ಮಂಕಾಗಿರುವ ಚರ್ಮಕ್ಕೆ ಸಹಜವರ್ಣ ಪಡೆಯಲು ಪಾಲಕ್ ನೆರವಾಗುತ್ತದೆ.
* ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕಣಗಳನ್ನು ನಾಶಮಾಡಬಲ್ಲ ಶಕ್ತಿ ಪಾಲಕ್‌ನಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ