Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಕ್ಕಳಿಕೆ ತಡೆಗಟ್ಟಲು ಸುಲಭ ಉಪಾಯಗಳು

ಬಿಕ್ಕಳಿಕೆ ತಡೆಗಟ್ಟಲು ಸುಲಭ ಉಪಾಯಗಳು
ಬೆಂಗಳೂರು , ಶುಕ್ರವಾರ, 26 ಏಪ್ರಿಲ್ 2019 (07:17 IST)
ಬೆಂಗಳೂರು: ಬಿಕ್ಕಳಿಕೆಯ ಕಿರಿ ಕಿರಿಯಿಂದ ಮುಕ್ತಿ ಪಡೆಯುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಸಡನ್ ಆಗಿ ಅನಪೇಕ್ಷಿತ ಅತಿಥಿಯಂತೆ ಬರುವ ಬಿಕ್ಕಳಿಕೆಯನ್ನು ಹೀಗೆ ತಡೆಗಟ್ಟಬಹುದು.

 
ಉಸಿರು ತಡೆಹಿಡಿಯುವುದು
ಬಿಕ್ಕಳಿಕೆ ಬಂದಾಗ ಕೆಲ ಕಾಲ ಉಸಿರು ಬಿಗಿಹಿಡಿಯುವುದರಿಂದ ಶ್ವಾಸಕೋಶದಲ್ಲಿ ಕಾರ್ಬನ್ ಡೈ ಆಕ್ಸೈಡ್ ಮರಳಿ ತುಂಬುತ್ತದೆ. ಇದರಿಂದ ಬಿಕ್ಕಳಿಕೆ ತಡೆಗಟ್ಟಬಹುದು.

ಸಕ್ಕರೆ ಸೇವಿಸಿ
ಬಿಕ್ಕಳಿಕೆ ಬಂದ ತಕ್ಷಣ ಒಂದು ಸ್ಪೂನ್ ಸಕ್ಕರೆ ಸೇವಿಸಿ ನೋಡಿ.

ಪೇಪರ್ ಬ್ಯಾಗ್ ನಲ್ಲಿ ಉಸಿರಾಡಿ
ಬಿಕ್ಕಳಿಕೆ ಬಂದಾಗ ಪೇಪರ್ ಬ್ಯಾಗ್ ಒಂದನ್ನು ತೆಗೆದುಕೊಂಡು ಅದನ್ನು ಮೂಗಿಗೆ ಹಿಡಿದು ಗಾಳಿ ಎಳೆದುಕೊಳ್ಳಿ.

ಮೊಣಕಾಲು ಮಡಚಿ
ಮೊಣಕಾಲನ್ನು ಮಡಚಿ ಎದೆ ಮಟ್ಟಕ್ಕೆ ತಾಕಿಸಿದ ಭಂಗಿಯಲ್ಲಿ ಕುಳಿತುಕೊಳ್ಳಿ.

ಸ್ವಲ್ಪ ಹುಳಿ
ಬಿಕ್ಕಳಿಕೆ ಬಂದಾಗ ನಿಂಬೆ ರಸದಂತಹ ಹುಳಿ ಪದಾರ್ಥ ಸೇವನೆಯೂ ಉಪಯೋಗಕ್ಕೆ ಬರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಒಳ್ಳೆ ಕೆಲಸಕ್ಕೆ ಹೊರಡುವ ಮೊದಲು ಸಕ್ಕರೆ ಮತ್ತು ಮೊಸರು ಸೇವಿಸಬೇಕು ಯಾಕೆ ಗೊತ್ತಾ?