ಬೆಂಗಳೂರು : ಕೆಲವರಿಗೆ ಕಾಫಿ,ಟೀ ಕುಡಿಯುವುದೆಂದರೆ ತುಂಬಾ ಇಷ್ಟ. ಬೋರ್ ಎನಿಸಿದಾಗ ಕಾಫಿ,ಟೀ ಕುಡಿಯುತ್ತಾರೆ. ಆದರೆ ಕಾಫಿ,ಟೀ ಹೆಚ್ಚಾಗಿ ಕುಡಿದರೆ ಆರೋಗ್ಯ ಹಾಳಾಗುತ್ತದೆ. ಆದಕಾರಣ ಕಾಫಿ,ಟೀಯಿಂದ ಆರೋಗ್ಯ ಹಾಳಾಗಬಾರದಂತಿದ್ದರೆ ಕಾಫಿ,ಟೀ ಕುಡಿಯುವ ಮುನ್ನ ಕೆಲಸ ಮಾಡಿ.
ರಸಾಯನಶಾಸ್ತ್ರದಲ್ಲಿ ದ್ರವ ಪದಾರ್ಥಗಳನ್ನು ಬೇರೆ ಮಾಡಲು ಆಮ್ಲಗಳು(ಆಸಿಡ್ಸ್) ಮತ್ತು ಆಲ್ಕಲೈನ್(ಕ್ಷಾರ) ಎರಡು ವಿಭಾಗಗಳಿವೆ. ಯಾವುದೇ ಒಂದು ದ್ರವ ಆಮ್ಲನಾ ಅಥವಾ ಆಲ್ಕಲೈನಾ ಎಂಬುದನ್ನು ತಿಳಿದುಕೊಳ್ಳಲು ಪಿಎಚ್ ಉಪಯೋಗವಾಗುತ್ತದೆ. ಪಿಎಚ್ ಸ್ಕೇಲ್ 1 ರಿಂದ 14 ವರೆಗೆ ಇರುತ್ತದೆ. 7 ಕ್ಕಿಂತ ಕಡಿಮೆ ಇರುವ ದ್ರವವನ್ನು ಆಮ್ಲ ಎಂದೂ, 7 ಕ್ಕಿಂತ ಹೆಚ್ಚಿದ್ದರೆ ಆ ದ್ರವವನ್ನು ಆಲ್ಕಲೈನ್(ಕ್ಷಾರ) ಎನ್ನುವರು. ಆದರೆ 7 ಇದ್ದರೆ ಆ ದ್ರವವನ್ನು ತಟಸ್ಥ ದ್ರವ ಎಂದು ಕರೆಯುತ್ತಾರೆ.
ಹೀಗೆ ನೋಡಿದರೆ ನೀರಿನ ಪಿಎಚ್ ಪ್ರಮಾಣ 7 ಕ್ಕಿಂತ ಹೆಚ್ಚು, ಆದ್ದರಿಂದ ನೀರು ಆಲ್ಕಲೈನ್ (ಕ್ಷಾರ) ಹೊಂದಿರುತ್ತದೆ.ಕಾಫಿ, ಟೀಗಳ ಪಿಎಚ್ ಪ್ರಮಾಣ 5, 6 ಆಗಿರುತ್ತದೆ. ಆದರಿಂದ ಕಾಫಿ, ಟೀ ಆಮ್ಲತ್ವ(ಆಸಿಡಿಕ್) ಹೊಂದಿರುತ್ತವೆ.
ಕಾಫಿ,ಟೀ ಕುಡಿದಾಗ ಅವು ಆಮ್ಲ ಗುಣವನ್ನು ಹೊಂದಿರುವುದರಿಂದ ಅವು ನಮ್ಮ ಹೊಟ್ಟೆಯಲ್ಲಿ ಅಲ್ಸರ್, ಕರುಳು ಸಂಬಂಧಿಸಿದ ಸಮಸ್ಯೆಗಳು, ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಆದ್ದರಿಂದ ಕಾಫಿ, ಟೀ ಕುಡಿಯುವ ಮುಂಚೆ ನೀರು ಸೇವಿಸಿದರೆ ಆಮ್ಲದ ಪ್ರಭಾವ ಕಡಿಮೆ ಯಾಗುತ್ತದೆ. ಜೊತೆಗೆ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಹಾಗಾಗಿ ಇನ್ನೂ ಮುಂದೆ ಕಾಫಿ, ಟೀ ಕುಡಿಯುವ ಮುಂಚೆ ತಪ್ಪದೇ ನೀರು ಕುಡಿಯಿರಿ.