ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಅತಿಯಾದ ತೂಕ. ಇದನ್ನು ಇಳಿಸಲು ಅವರು ಹರಸಾಹಸ ಪಡುತ್ತಾರೆ. ಅದರ ಬದಲು ಈ ಡ್ರಿಕ್ ಕುಡಿದರೆ 3 ದಿನದಲ್ಲಿ 6 ಕೆಜಿ ತೂಕ ಇಳಿಸಬಹುದು.
5 ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಸಣ್ಣದಾಗಿ ಕಟ್ ಮಾಡಿಕೊಳ್ಳಿ,1 ನಿಂಬೆ ಹಣ್ಣನ್ನು ಕೂಡ ಸಣ್ಣದಾಗಿ ಕಟ್ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ 2-3 ಗ್ಲಾಸ್ ನೀರು ಹಾಕಿ ಈ ಕಟ್ ಮಾಡಿಕೊಂಡ ಬೆಳ್ಳುಳ್ಳಿ ಮತ್ತು ನಿಂಬೆಹಣ್ಣನ್ನು ಚೆನ್ನಾಗಿ 10 ನಿಮಿಷಗಳ ಕಾಲ ಬೇಯಿಸಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂಡಿ ತಿನ್ನುವ ಅರ್ಧಗಂಟೆ ಮೊದಲು 1 ಗ್ಲಾಸ್, ಮಧ್ಯಾಹ್ನ ಊಟ ಮಾಡುವ ಅರ್ಧ ಗಂಟೆ ಮೊದಲು 1 ಗ್ಲಾಸ್, ಹಾಗೇ ರಾತ್ರಿ ಊಟ ಮಾಡುವ ಅರ್ಧ ಗಂಟೆ ಮೊದಲು 1 ಗ್ಲಾಸ್ ಹೀಗೆ ದಿನಕ್ಕೆ 3 ಗ್ಲಾಸ್ ಕುಡಿಯಬೇಕು. ಇದರಿಂದ 3 ದಿನಗಳಲ್ಲಿ 6ಕೆಜಿ ತೂಕ ಇಳಿಸಬಹುದು.