Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಕ್ಕಿದ ಅನ್ನ ಬಿಸಿ ಮಾಡಿ ತಿಂದರೆ ಏನಾಗುತ್ತದೆ ಗೊತ್ತಾ?

ಮಿಕ್ಕಿದ ಅನ್ನ ಬಿಸಿ ಮಾಡಿ ತಿಂದರೆ ಏನಾಗುತ್ತದೆ ಗೊತ್ತಾ?
Bangalore , ಮಂಗಳವಾರ, 11 ಜುಲೈ 2017 (10:04 IST)
ಬೆಂಗಳೂರು: ಸಾಮಾನ್ಯವಾಗಿ ರಾತ್ರಿ ಮಿಕ್ಕಿದ ಅನ್ನವನ್ನು ನಾವು ಕಸದ ಬುಟ್ಟಿಗೆ ಸೇರಿಸುವುದಿಲ್ಲ. ಅನ್ನ ದುಬಾರಿಯಾಗಿರುವ ಈ ಕಾಲದಲ್ಲಿ ಅದನ್ನು ಬಿಸಿ ಮಾಡಿಯೋ, ಚಿತ್ರಾನ್ನ ಮಾಡಿಯೋ ಮರಳಿ ಉಪಯೋಗಿಸುತ್ತೇವೆ.


ಆದರೆ ಆಹಾರ ಗುಣಮಟ್ಟ ಇಲಾಖೆಯ ತಜ್ಞರ ಪ್ರಕಾರ ಹೀಗೆ ಮಾಡಲೇಬಾರದಂತೆ. ಅಂದರೆ ಮಿಕ್ಕಿದ ಅನ್ನವನ್ನು ಬಿಸಿ ಮಾಡಿ ಬಳಸಬಾರದು ಎಂದಿದ್ದಾರೆ ತಜ್ಞರು. ಇದು ರೋಗಗಳಿಗೆ ದಾರಿ ಮಾಡಿಕೊಟ್ಟಂತೆ ಎನ್ನುವುದು ಇಲಾಖೆಯ ಅಭಿಪ್ರಾಯ.

ಮಿಕ್ಕಿದ ಅನ್ನದಲ್ಲಿರುವ ಬ್ಯಾಸಿಲ್ಲಾ ಸಿರಸ್ ಎನ್ನುವ ಬ್ಯಾಕ್ಟೀರಿಯಾದಿಂದಾಗಿ ಅದನ್ನು ಬಿಸಿ ಮಾಡಿ ಬಳಕೆ ಮಾಡುವುದರಿಂದ ಫುಡ್ ಪಾಯಿಸನ್ ನಂತಹ ಸಮಸ್ಯೆ ಬರಬಹುದೆಂದು ತಜ್ಞರು ಹೇಳುತ್ತಾರೆ. ಬಿಸಿ ಮಾಡುವುದರಿಂದ ಈ ಬ್ಯಾಕ್ಟೀರಿಯಾ ನಾಶವಾಗಿ ಹೊಸ ವಿಷಾಹಾರವಾಗಿ ಮಾರ್ಪಾಡಾಗುತ್ತದಂತೆ.

ಮತ್ತೆ ಬಿಸಿ ಮಾಡಿ ರೂಂ ಟೆಂಪರೇಚರ್ ಗೆ ಇಟ್ಟಾಗ ಆಹಾರದಲ್ಲಿರುವ ವಿಷಾಂಶ ಹೆಚ್ಚುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಕರ್ಷಕವಾದ ಕಣ್ಣುಗಳಿಗಾಗಿ ಈ ಐ ಮೇಕಪ್ ಟ್ರೈ ಮಾಡಿ