Webdunia - Bharat's app for daily news and videos

Install App

ಈ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಏನೆಲ್ಲಾ ಖಾಯಿಲೆ ಬರುತ್ತೆ ಗೊತ್ತಾ...?

Webdunia
ಸೋಮವಾರ, 8 ಜನವರಿ 2018 (11:32 IST)
ಬೆಂಗಳೂರು : ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿಯೇ ತಿನ್ನುತ್ತೇವೆ. ಅದನ್ನು ಬೇಯಿಸಿ ತಿಂದರೆ ಅದರಲ್ಲಿರುವ ಪೊಷ್ಟಿಕಾಂಶಗಳು ನಾಶವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿನ್ನುವುದರಿಂದ ಹೊಟ್ಟೆಹಾಳಾಗುತ್ತದೆ, ಜೊತೆಗೆ ಕೆಲವು ರೋಗಗಳು ಬರುತ್ತದೆ. ಅಂತಹ  ಆಹಾರ ಪದಾರ್ಥಗಳು ಯಾವುದು ಅಂತ ತಿಳಿಯೋಣ.

 
ಮೊಳಕೆ ಕಾಳು:- ಮೊಳಕೆ ಬಂದಿರುವ ಯಾವುದೆ ಕಾಳುಗಳನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ತುಂಬಾ ಇರುತ್ತದೆಯಂತೆ. ಇವುಗಳನ್ನು ತಿನ್ನುವುದರಿಂದ ಆ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರಿ ರೋಗನಿರೋಧಕ ಶಕ್ತಿಯನ್ನು ಹಾಳುಮಾಡುತ್ತದೆಯಂತೆ. ಹಾಗಾಗಿ ಮೊಳಕೆ ಕಾಳುಗಳನ್ನು ಬೇಯಿಸಿ ತಿನ್ನಿ.



ಟೊಮೆಟೊ:- ಟೊಮೆಟೊವನ್ನು ಹಸಿಯಾಗಿ ತಿನ್ನಬಾರದಂತೆ. ಅದರಲ್ಲಿ ಗ್ಲೈಕೋ ಆಲ್ಕಲೈಡ್ಸ್ ಇರುತ್ತೆ. ಅದು ಹೊಟ್ಟೆ ಸೇರಿದರೆ ಆ್ಯಸಿಡಿಟಿ ಉಂಟುಮಾಡುತ್ತದೆ.

 
ಹಸಿರು ಸೊಪ್ಪುಗಳು:- ಹಸಿರು ಸೊಪ್ಪುಗಳನ್ನು ಹಸಿಯಾಗಿ ತಿನ್ನಬೇಡಿ. ಅದರಲ್ಲಿ ಆಗ್ಸಾನಿಕ್ ಆ್ಯಸಿಡ್ ಇರುತ್ತೆ. ಅದು ನಮ್ಮ ಶರೀರದಲ್ಲಿರುವ ಐರಾನ್ ಹಾಗು ಕ್ಯಾಲ್ಸಿಯಂನ ಕಡಿಮೆ ಮಾಡುತ್ತದೆ. ಆದ್ದರಿಂದ ಹಸಿರು ಸೊಪ್ಪನ್ನು ಯಾವಾಗಲೂ ಬೇಯಿಸಿ ತಿಂದರೆ ಉತ್ತಮ.

 
ಹಾಗೆ ಅಣಬೆಯಲ್ಲಿ ಪ್ಯಾಸಿನೊಜಿನಿಕ್ ಒಂದು ಅಂಶವಿದ್ದು ಇದು ನಮ್ಮ ಶರೀರಕ್ಕೆ ಸೇರಿದರೆ ಅದು ವಿಷಪೂರಿತವಾಗುತ್ತದೆ. ಆದ್ದರಿಂದ ಅದನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಬಾದಾಮಿ ಸಿಪ್ಪೆಯಲ್ಲಿ ಸೈನೆಡ್ ಇರುತ್ತೆ. ಇದು ನಮ್ಮ ದೇಹಕ್ಕೆ ಸೇರಿದರೆ ವಿಷಪೂರಿತವಾಗುತ್ತದೆ. ಆದ್ದರಿಂದ ಬಾದಾಮಿಯನ್ನು 8-10 ಗಂಟೆ ನೆನೆಸಿಟ್ಟು ನಂತರ ಸಿಪ್ಪೆ ತೆಗೆದು ತಿನ್ನಿ. ಹಸಿಹಾಲಿನಲ್ಲಿ ಬ್ಯಾಕ್ಟೀರಿಯಾಗಳು ಇರುವುದರಿಂದ ಇದು ನಮ್ಮ ಶರೀರ ಸೇರಿಕೊಂಡರೆ ವಾಂತಿ, ಭೇದಿ ಶುರುವಾಗುತ್ತದೆ. ಹಾಗೆ ಮೊಟ್ಟೆ, ಗೊಡಂಬಿಯನ್ನು ಕೂಡ ಹಸಿಯಾಗಿ ತಿನ್ನಬಾರದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments