ಬೆಟ್ಟದ ನೆಲ್ಲಿಕಾಯಿ ಲೇಹ ಮಾಡಲು ಬೇಕಾಗುವ ಸಾಮಾಗ್ರಿಗಳು:
ಬೆಟ್ಟದ ನೆಲ್ಲಿಕಾಯಿ 20, ಬೆಲ್ಲ 5 ಕಪ್, ನೀರು 2 ಕಪ್
ಮಾಡುವ ವಿಧಾನ:
ಮೊದಲಿಗೆ ಒಂದು ಬಾಣಲೆಯಲ್ಲಿ ತುರಿದ ಬೆಟ್ಟದ ನೆಲ್ಲಿಕಾಯಿಯನ್ನು ಹಾಕಬೇಕು. ನಂತರ ಅದಕ್ಕೆ 1 ½ ಕಪ್ ನಷ್ಟು ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಇನ್ನೊಂದು ಬಾಣಲೆಯಲ್ಲಿ ಬೆಲ್ಲ ಮತ್ತು ½ ಕಪ್ ನೀರು ಹಾಕಿ ಬೆಲ್ಲ ಕರಗುವವರೆಗೂ ಬಿಸಿ ಮಾಡಬೇಕು. ಬಳಿಕ ಅದನ್ನು ಬೇಯುತ್ತಿರುವ ಬೆಟ್ಟದ ನೆಲ್ಲಿಕಾಯಿ ಮಿಶ್ರಣಕ್ಕೆ ಸೇರಿಸಬೇಕು. ನಂತರ ಅದು ಪಾಕ ಬರುವವರೆಗೂ ಚೆನ್ನಾಗಿ ಬೇಯಿಸಬೇಕು. ಆಗ ಬೆಟ್ಟದ ನೆಲ್ಲಿಕಾಯಿ ಲೇಹ ರೆಡಿಯಾಗುತ್ತದೆ. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಟೇಬಲ್ ಚಮದಷ್ಟು ಸೇವಿಸಬೇಕು.