ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಮದುವೆಗಿಂತ ಹೆಚ್ಚಾಗಿ ಉದ್ಯೋಗ ಕಡೆ ಗಮನ ಕೊಡುತ್ತಾರೆ. ಅಲ್ಲದೇ ಕೆಲವರು ಮದುವೆಯಾಗಲು ಬಯಸಿದರೆ ಇನ್ನೂ ಕೆಲವರು ಮದುವೆಯಗದೇ ಜೀವನವಿಡೀ ಒಂಟಿಯಾಗಿರಲು ಬಯಸುತ್ತಾರೆ.
ಆದರೆ ಮದುವೆಯಾಗಿರುವಂತಹ ಮಹಿಳೆಯರಿಗಿಂತ ಹೆಚ್ಚು ಒಂಟಿ ಮಹಿಳೆಯರು ಸಂತೋಷವಾಗಿರುವರು ಎಂದು ಅಧ್ಯಯನ ವರದಿಯೊಂದು ಹೇಳಿದೆ. ಅಲ್ಲದೇ ಮದುವೆ ಹಾಗೂ ಮದುವೆ ಬಳಿಕ ಮಕ್ಕಳನ್ನು ಪಡೆಯದೆ ಇರುವಂತಹ ಮಹಿಳೆಯರು ತುಂಬಾ ಸಂತೋಷವಾಗಿರುತ್ತಾರೆ ಎಂದು ವರದಿಗಳು ತಿಳಿಸಿದೆ.
ಅಮೆರಿಕನ್ ಟೈಮ್ ಯೂಸ್ ಸರ್ವೇ(ಎಟಿಯುಎಸ್) ಮದುವೆಯಾದ, ಮದುವೆಯಾಗದ, ವಿಚ್ಛೇದಿತ ಮಹಿಳೆಯರಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಮದುವೆಯಾಗಿರುವ ಜನರಿಗಿಂತ ಮದುವೆಯಾಗದೆ ಇರುವಂತಹ ಜನರಲ್ಲಿ ಸಂಕಷ್ಟಗಳು ತುಂಬಾ ಕಡಿಮೆ ಎಂಬುದು ತಿಳಿದುಬಂದಿದೆ.