ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಹೆಚ್ಚಿನವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿಯನ್ನು ಅತಿಯಾಗಿ ಸೇವಿಸುತ್ತಾರೆ. ಆದರೆ ಬೇಸಿಗೆಯಲ್ಲಿ ವಾತಾವರಣದಲ್ಲಿ ಶಾಖ ಹೆಚ್ಚಾಗಿದ್ದರಿಂದ ಶುಂಠಿಯನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ.
*ಶುಂಠಿಯನ್ನು ಬೇಸಿಗೆಯಲ್ಲಿ ಅತಿಯಾಗಿ ಸೇವಿಸಿದರೆ ಎದೆಯುರಿ ಸಮಸ್ಯೆ ಕಾಡುತ್ತದೆ. ಎದೆಯಲ್ಲಿ ಸುಡುವ ಸಂವೇದನೆ ಕಂಡುಬರುತ್ತದೆ.
*ಶುಂಠಿಯನ್ನು ಗರ್ಭಿಣಿಯರು ಸೇವಿಸುವುದು ಅಪಾಯ. ಇದು ಗರ್ಭಕೋಶದ ಸಂಕೋಚನೆಗೆ ಕಾರಣವಾಗಿ ರಕ್ತಸ್ರಾವವನ್ನು ಹೆಚ್ಚಿಸುತ್ತದೆ. ಇದರಿಂದ ಗರ್ಭಪಾತವಾಗುವ ಸಂಭವವಿದೆ.
*ಶುಂಠಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಇದನ್ನು ಸೇವಿಸಬಾರದು. ಇದು ಔಷಧದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
*ಶುಂಠಿ ರಕ್ತವನ್ನು ತೆಳ್ಳಗೆ ಮಾಡುತ್ತದೆ. ಇದರಿಂದ ನಿಮ್ಮಲ್ಲಿ ರಕ್ತದೊತ್ತಡ ಅಧಿಕವಾಗುತ್ತದೆ. ಹಾಗಾಗಿ ಬಿಪಿ ಇರುವವರು ಇದನ್ನು ಸೇವಿಸಬೇಡಿ.
*ಕೂದಲುದುರುವ ಸಮಸ್ಯೆ ಇರುವವರು ಶುಂಠಿಯನ್ನು ಸೇವಿಸಬೇಡಿ. ಇದು ಕೂದಲು ಮತ್ತಷ್ಟು ಉದುರುವಂತೆ ಮಾಡುತ್ತದೆ.