ಬೆಂಗಳೂರು : ಮಾಂಸಹಾರಗಳು ದೇಹಕ್ಕೆ ಬಹಳ ಬೇಗನೆ ಪೋಷಕಾಂಶಗಳನ್ನು ಒದಗಿಸುತ್ತವೆಯಂತೆ. ಅದರಲ್ಲೂ ಸಮುದ್ರದ ಆಹಾರಗಳು ಆರೋಗ್ಯಕ್ಕೆ ಇನ್ನು ಉತ್ತಮ ಎನ್ನಲಾಗಿದೆ. ಹಾಗಾದ್ರೆ ದಿನಕ್ಕೆರಡು ಬಾರಿ ಮೀನನ್ನು ಸೇವಿಸಿದರೆ ಏನಾಗುತ್ತದೆ ಎಂಬ ವಿಚಾರ ತಿಳಿದುಕೊಳ್ಳಿ.
ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ದಿನಕೆರಡು ಬಾರಿ ಮೀನು ಸೇವಿಸಿದರೆ ಸಂಧಿವಾತಕ್ಕೆ ದಿವ್ಯ ಔಷಧವಾಗುತ್ತದೆ ಎಂದು ಹೇಳಿದೆ. ಮೀನಿನಲ್ಲಿರುವ ಒಮೆಗಾ3 ದೇಹದಲ್ಲಿರುವ ಎಲ್ಲಾ ಅಂಗಗಳಿಗೂ ಪೋಷಣೆ ನೀಡುತ್ತದೆಯಂತೆ. ಸಂಧಿವಾತ ಸಮಸ್ಯೆಗೆ ಮೀನಿನಲ್ಲಿರುವ ಅಂಶಗಳನ್ನು ಔಷಧಿಯ ರೂಪದಲ್ಲಿ ನೀಡಲಾಗುತ್ತದೆ. ಆದ್ದರಿಂದ ಈ ಔಷಧದ ಬದಲು ಮೀನನ್ನು ತಿನ್ನುವುದರಿಂದ ಈ ಸಮಸ್ಯೆ ಬೇಗೆನೆ ನಿವಾರಣೆಯಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.