Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಲೆಬ್ರೆಟಿಗಳ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ?

ಸೆಲೆಬ್ರೆಟಿಗಳ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ?
ಬೆಂಗಳೂರು , ಶನಿವಾರ, 13 ನವೆಂಬರ್ 2021 (07:15 IST)
ಸೌಂದರ್ಯ ಹಾಗು ಸುಂದರವಾದ ಅಭಿನಯದಿಂದ ಜನಮನ ಗೆದ್ದಿದ್ದಾರೆ. ನಮ್ಮ ಕನ್ನಡಿಗರು ಎಂಬುದು ಹೆಮ್ಮೆಯ ವಿಷಯ. ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಸೌಂದರ್ಯದ ಜೊತೆ ಜೊತೆಯಲ್ಲಿ ತಾವು ಫಿಟ್ನೆಸ್ ಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದರ ಕುರಿತು ಅವರ ಫೋಸ್ಟ್ ಗಳಲ್ಲಿ ಕಾಣಬಹುದು. ಆಕೆಯು ತನ್ನ ದೇಹ ಸೌಂದರ್ಯವನ್ನು ಹೇಗೆ ಹಾಗು ಯಾವ ರೀತಿ ಕಾಪಾಡಿಕೊಳ್ಳುತ್ತಾರೆ? ಫಿಟ್ನೆಸ್ ನ ಕುರಿತು ಅವರು ಅನುಸರಿಸುವ ಮಾರ್ಗಗಳೇನು? ಎಂಬುದನ್ನು ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಓದಿ, ಅನುಸರಿಸಿ.
ಯಥೇಚ್ಚವಾಗಿ ನೀರು ಕುಡಿಯುತ್ತಾರೆ
ಸೌಂದರ್ಯದಿಂದ ವಿಶ್ವ ವಿಖ್ಯಾತಿಯಾಗಿದ್ದಾರೆ ಎಂಬುದು ನಿಮಗೆ ತಿಳಿದೇ ಇದೆ. ತಮ್ಮ ದೇಹವನ್ನು ಹೈಡ್ರೇಟ್ ಮಾಡಲು ಹೆಚ್ಚಾಗಿ ನೀರನ್ನು ಕುಡಿಯುತ್ತಾರಂತೆ. ತಮ್ಮ ಶೂಟಿಂಗ್ ಸಮಯದಲ್ಲಿಯೂ ಕೂಡ ನೀರು ಅಥವಾ ಆರೋಗ್ಯಕರವಾದ ಎಳನೀರನ್ನು ಕುಡಿಯುತ್ತಾರೆ. ಕೇವಲ ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡದೇ, ನೈಸರ್ಗಿಕವಾದ ಚರ್ಮಕ್ಕೂ ಮಹತ್ವವನ್ನು ನೀಡುತ್ತಾರೆ. ಹೆಚ್ಚಾಗಿ ನೀರು ಕುಡಿಯುವುದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
ಆಹಾರ
ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸಲು ಇಷ್ಟ ಪಡುತ್ತಾರಂತೆ. ಅವರ ದಿನನಿತ್ಯದ ಆಹಾರದಲ್ಲಿ ತಾಜಾ ತರಕಾರಿಗಳಿಂದ ತಯಾರಿಸಿದ ಖಾದ್ಯಕ್ಕೆ ಮೊದಲ ಪ್ರಾಶಸ್ತ್ಯ. ಮುಖ್ಯವಾಗಿ ಫೈಬರ್ ನಿಂದ ಕೂಡಿದ ಆಹಾರದ ಸೇವನೆಯು ಅನುಷ್ಕಾರ ಅಚ್ಚು ಮೆಚ್ಚಿನ ಪೌಷ್ಟಿಕ ಆಹಾರವಂತೆ. ಹಾಗೆಯೇ ಹಣ್ಣಿನ ಸೇವನೆಯು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲವಂತೆ. ಅನುಷ್ಕಾ ತಮ್ಮ ಡಯಟ್ ಪಟ್ಟಿಯಲ್ಲಿ ಹಣ್ಣು ಹಾಗು ತರಕಾರಿಗಳ ಸೇವನೆ ಇದ್ದೇ ಇರುತ್ತದೆಯಂತೆ. ಅನುಷ್ಕಾ ಶೆಟ್ಟಿ ಪೋಷಕಾಂಶ ಭರಿತ ಆಹಾರಕ್ಕೆ ಎಷ್ಟು ಒತ್ತು ನೀಡುತ್ತಾರೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.
ಮಿತವಾದ ಸೇವನೆ
ಆಹಾರದಲ್ಲಿ ಬಹಳ ಜಾಗ್ರತೆ ವಹಿಸುತ್ತಾರೆ. ಏನು ತಿನ್ನಬೇಕು? ಎಷ್ಟು ತಿನ್ನಬೇಕು? ಯಾವ ಪ್ರಮಾಣದಲ್ಲಿ ತಿನ್ನಬೇಕು? ಎಂಬ ಪಟ್ಟಿಯನ್ನು ಅನುಸರಿಸುತ್ತಿದ್ದಾರೆ. ತಮ್ಮ ಆಹಾರವನ್ನು ಮಿತವಾಗಿ ಸೇವಿಸುತ್ತಾರಂತೆ. ಯಾವುದೇ ಕಾರಣಕ್ಕೂ ಹೆಚ್ಚೆಚ್ಚು ಆಹಾರದ ಸೇವನೆಯಿಂದ ದೂರವಿರುತ್ತಾರಂತೆ.
ಊಟ ಯಾವ ಸಮಯದಲ್ಲಿ ಮಾಡುತ್ತಾರೆ ಗೊತ್ತ?
ರಾತ್ರಿಯ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ೮ ಗಂಟೆಯ ಸಮಯದ ಒಳಗೆ ಅನುಷ್ಕಾ ಅವರ ರಾತ್ರಿ ಊಟ ಮುಗಿಸುತ್ತಾರಂತೆ. ಮಲಗುವುದಕ್ಕಿಂತ ೨ ರಿಂದ ೩ ಗಂಟೆಯ ಮುಂಚೆ ಊಟ ಮಾಡುವುದರಿಂದ ತಿಂದ ಆಹಾರವು ಸಮರ್ಪಕವಾಗಿ ಜೀರ್ಣವಾಗುತ್ತದೆ ಎನ್ನತ್ತಾರೆ ಅನುಷ್ಕಾ. ಬೇಗ ಊಟ ಮಾಡುವುದರಿಂದ ದೇಹಕ್ಕೆ ಅನೇಕ ರೀತಿಯ ಉಪಯೋಗಗಳಿದ್ದು, ಬೇಗ ಜೀರ್ಣ ಆಗುವುದಲ್ಲದೇ, ಮೆಟಾಬಾಲಿಕ್ ಅನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಹೀಗೆ ಬೇಗ ಊಟವನ್ನು ಸೇವಿಸುವುದರಿಂದ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಅನುಷ್ಕಾ ಶೆಟ್ಟಿ.
ಹೊರಗಿನ ಆಹಾರಕ್ಕಿಂತ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಹೆಚ್ಚು ಮಹತ್ವ ನೀಡುತ್ತಾರಂತೆ. ಎಲ್ಲದಕ್ಕಿಂತ ಮುಖ್ಯವಾಗಿ ಅನುಷ್ಕಾ ಶೆಟ್ಟಿಯವರು ಎಣ್ಣೆಯಲ್ಲಿ ಕರಿದ ಆಹಾರವನ್ನು ಮಿತಿಗೊಳಿಸುತ್ತಾರಂತೆ. ಅಷ್ಟೇ ಅಲ್ಲ ಮೈದಾ ಹಾಗು ಸಕ್ಕರೆಯ ಸೇವನೆಯನ್ನು ಕೂಡ ಕಡಿತಗೊಳಿಸುತ್ತಾರೆ. ಇವುಗಳ ಸೇವನೆಯು ತೂಕದಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ತೂಕ ಇಳಿಕೆಯ ಸಲಹೆಗಳು
ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹಾಗು ಸುಂದರವಾದ ಸೌಂದರ್ಯವನ್ನು ಪಡೆಯಲು ಆರೋಗ್ಯಕರವಾದ ಮಾರ್ಗಗಳನ್ನು ಕಂಡು ಹಿಡಿದುಕೊಂಡಿದ್ದಾರೆ.ಅದೇನೆಂದರೆ , ತಾವು ಪ್ರತಿನಿತ್ಯವು ಮೆಡಿಟೇಶನ್ (ಧ್ಯಾನ) ಹಾಗು ಯೋಗ ಮಾಡುತ್ತಾರಂತೆ. ಅನುಷ್ಕಾ ಪ್ರಕಾರ, ಆರೋಗ್ಯಕರವಾದ ಜೀವನಕ್ಕೆ ಯೋಗ ಹಾಗು ಕೆಲವು ದೇಹದಂಡನೆ ಅತಿ ಮುಖ್ಯ ಎಂದು ಹೇಳುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ವ್ಯಾಯಾಮಕ್ಕೆ ಈ ರೀತಿ ತಯಾರಿ ಮಾಡಿಕೊಳ್ಳಿ