ಬೆಂಗಳೂರು : ಹೆಚ್ಚಿನವರು ಅಕ್ಕಿಯನ್ನು ಅಡುಗೆ ಮಾಡಲು ಮತ್ತು ತಿಂಡಿ ತಿನಿಸುಗಳನ್ನು ತಯಾರಿಸಲು ಬಳಸುತ್ತಾರೆ. ಆದರೆ ಈ ಅಕ್ಕಿಯನ್ನು ಚರ್ಮಕ್ಕೂ ಬಳಸಬಹುದು. ಇದರಿಂದ ಚರ್ಮದ ಮೇಲಿನ ಕಲೆ ನಿವಾರಣೆಯಾಗುತ್ತದೆ. ಮುಖ ಹೊಳೆಯುತ್ತದೆ. ಹಾಗಾದ್ರೆ ಅದನ್ನು ತಯಾರಿಸುವುದು ಹೇಗೆಂದು ತಿಳಿದುಕೊಳ್ಳೋಣ.
ಅಕ್ಕಿಯಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ಇದು ನಮ್ಮ ಆರೋಗ್ಯದ ಜೊತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಕ್ಕಿಯ ತೊಳೆದ ನೀರನ್ನು ಮುಖಕ್ಕೆ ಬಳಸಿದರೆ ಮುಖದ ಸೌಂದರ್ಯ ವೃದ್ಧಿಯಾಗುತ್ತದೆ.
ನೀವು ಅಕ್ಕಿಯಿಂದ ಅನ್ನ ತಯಾರಿಸಿ. ಬಳಿಕ ಅದನ್ನು ರುಬ್ಬಿ ಪೇಸ್ಟ್ ತಯಾರಿಸಿ. ಇದಕ್ಕೆ ಕೆಲವು ಹನಿ ವಿಟಮಿನ್ ಇ ಎಣ್ಣೆಯನ್ನು ಸೇರಿಸಿ ಫ್ರಿಜ್ ನಲ್ಲಿಡಿ. ಸ್ನಾನ ಮಾಡುವ ಮುನ್ನ ಇದನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ . ಇದರಿಂದ ಮುಖದ ಹೊಳಪು ಮತ್ತು ಮೃದುತ್ವ ಹೆಚ್ಚಾಗುತ್ತದೆ.