*ಕಿತ್ತಲೆ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ಹಣ್ಣಿನಲ್ಲಿ ನೈಸರ್ಗಿಕವಾಗಿ 11 ಗ್ರಾಂ.ನಷ್ಟು ಸಕ್ಕರೆಯ ಪ್ರಮಾಣವಿರುತ್ತದೆ. ಇದನ್ನು ಜ್ಯೂಸ್ ಮಾಡುವುದರಿಂದ ಔಷಧೀಯ ಗುಣ ಕಡಿಮೆಯಾಗುತ್ತದೆ.
*ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುತ್ತಾರೆ. ಆದರೆ ಸೇಬಿನಲ್ಲೂ 17-18 ಗ್ರಾಂ.ನಷ್ಟು ಸಕ್ಕರೆಯ ಅಂಶವಿದೆ. ಇದನ್ನೂ ಸಹ ಜ್ಯೂಸ್ ಮಾಡುವುದಕ್ಕಿಂತಲೂ ಕಚ್ಚಿ ತಿನ್ನುವುದು ಉತ್ತಮ.
*ಪೀಚ್ ತುಂಬಾ ರುಚಿಕರ ಹಣ್ಣಾಗಿದೆ. ಇದರಲ್ಲಿ 12 ಗ್ರಾಂ ಸಕ್ಕರೆಯ ಅಂಶವಿದೆ.
*ರಸ್ಬೆರ್ರಿ ಹಣ್ಣಿನಲ್ಲಿ ಸಕ್ಕರೆಯ ಅಂಶ ತುಂಬಾ ಕಡಿಮೆಯಿರುತ್ತದೆ. ಒಂದು ಲೋಟ ರಸ್ಬೆರ್ರಿ ರಸದಲ್ಲಿ ಕೇವಲ 5 ಗ್ರಾಂ.ನಷ್ಟು ಸಕ್ಕರೆಯಿರುತ್ತದೆ.
*ಅವಕಾಡೊ(ಬಟರ್ ಫ್ರೂಟ್) ಅಥವಾ ಬೆಣ್ಣೆಹಣ್ಣು ಕಡಿಮೆ ಪ್ರಮಾಣದ ಸಕ್ಕರೆ ಅಂಶ ಹೊಂದಿರುತ್ತದೆ. ಫೈಬರ್ ಮತ್ತು ಉತ್ತಮ ಕೊಬ್ಬಿನಾಂಶ ಹೆಚ್ಚಾಗಿರುವ ಈ ಹಣ್ಣಿನಲ್ಲಿ ಕೆಲವೇ ಕೆಲವು ಗ್ರಾಂಗಳಷ್ಟು ಸಕ್ಕರೆ ಅಂಶ ಕಂಡು ಬರುತ್ತದೆ.
*ನೇರಳೆ ಮತ್ತು ಬೆರ್ರಿಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶಗಳು ಹೆಚ್ಚಾಗಿರುತ್ತದೆ. ಕಡಿಮೆ ಪ್ರಮಾಣದ ಸಕ್ಕರೆ ಅಂಶ ಹೊಂದಿರುವ ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ.
*ಸ್ಟ್ರಾಬೆರಿಯಲ್ಲಿ ಸಕ್ಕರೆ ಪ್ರಮಾಣವು ತುಂಬಾ ಕಡಿಮೆಯಿದ್ದು, ಫೈಬರ್ ಅಂಶ ಜಾಸ್ತಿಯಿರುತ್ತದೆ. ಸಕ್ಕರೆ ಪ್ರಮಾಣದ ಭಯವಿಲ್ಲದೆ ತಿನ್ನಬಹುದಾದ ಹಣ್ಣುಗಳಲ್ಲಿ ಸ್ಟ್ರಾಬೆರಿ ಕೂಡ ಒಂದಾಗಿದೆ.
*ದ್ರಾಕ್ಷಿಗಳಲ್ಲಿ ಸುಮಾರು 8 ಗ್ರಾಂ.ನಷ್ಟು ಸಕ್ಕರೆ ಅಂಶಗಳಿರುತ್ತದೆ. ಬಾಯಲ್ಲಿ ನೀರೂರಿಸುವ ದ್ರಾಕ್ಷಿಯನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.