Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ...? ಅದರಿಂದಾಗುವ ಅಡ್ಡ ಪರಿಣಾಮಗಳು ಇಲ್ಲಿದೆ ನೋಡಿ!

ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ...? ಅದರಿಂದಾಗುವ ಅಡ್ಡ ಪರಿಣಾಮಗಳು ಇಲ್ಲಿದೆ ನೋಡಿ!
ಬೆಂಗಳೂರು , ಶುಕ್ರವಾರ, 12 ಜನವರಿ 2018 (06:44 IST)
ಬೆಂಗಳೂರು : ಹೊಸದಾಗಿ ಮದುವೆಯಾಗುವ ದಂಪತಿಗಳು ತಮ್ಮ ನವ ವೈವಾಹಿಕ ಜೀವನದ ಸುಖವನ್ನು ಅನುಭವಿಸಲು, ಅದರಲ್ಲೂ ಮುಖ್ಯವಾಗಿ ಕೆಲಸಕ್ಕೆ ಹೋಗುವ ದಂಪತಿಗಳು ಮಗುವಾಗುವುದನ್ನು ತಡೆಯಲು ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಒಂದು ಮಗುವಾದ ನಂತರ ಇನ್ನೊಂದು ಮಗುವಿನ ಮಧ್ಯ ವರ್ಷಗಳ ಅಂತರವಿರಿಸಲು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಮಗುವಿನ ಲಾಲನೆ ಪಾಲನೆಯಲ್ಲಿ ಸಮಯ ಕಳೆದರೆ ನಮ್ಮ ವೈವಾಹಿಕ ಜೀವನದ ಸವಿಯನ್ನು ಅನುಭವಿಸಲು ಆಗುವುದಿಲ್ಲವೆಂದು ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.

 
ಆದರೆ ಈ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ  ಅನೇಕ ಅಡ್ಡ ಪರಿಣಾಮಗಳಾಗುತ್ತವೆ ಎಂಬ ತಿಳುವಳಿಕೆ ಕೆಲವರಿಗೆ ಇಲ್ಲ. ಇದನ್ನು ಸೇವಿಸಿದ ಕೆಲವರ ಪಾಲಿಗೆ ಇದು ಮುಳ್ಳಾಗಿ ಪರಿಣಮಿಸಿ ಜೀವನವಿಡಿ ಮಕ್ಕಳಿಲ್ಲ ಎಂಬ ಕೊರಗಲ್ಲೇ ಕಾಲಕಳೆದವರೂ ಇದ್ದಾರೆ. ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಆಗುವ  ಅಡ್ಡ ಪರಿಣಾಮಗಳು ಯಾವುವೆಂದರೆ-

 
ಈ ಮಾತ್ರೆಗಳನ್ನು ಸೇವಿಸುವ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ಏರಿಳಿತಗಳಾಗುತ್ತದೆ. ಸದಾ ತಲೆನೋಯುತ್ತಾ ಇರುವ ಸಾಧ್ಯತೆಗಳಿವೆ. ಮೊದಲ ಸಲ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಕೆಲವು ಮಹಿಳೆಯರಿಗೆ ಜೀವದಲ್ಲಿ ಸಂಕಟವಾದ ಅನುಭವವಾಗುತ್ತದೆ. ಕ್ರಮೇಣ ಅದು ಕಡಿಮೆಯಾಗುತ್ತದೆ. ಸ್ತನಗಳಲ್ಲಿ ಮೃದುತ್ವ, ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಆವಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಈ ಮಾತ್ರೆಗಳನ್ನು ಸೇವಿಸುವವರಿಗೆ ಋತುಸ್ರಾವದ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವವಾಗುವ ಸಾಧ್ಯತೆಗಳಿವೆ. ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಸಮಯದಲ್ಲಿ ದೇಹದ ತೂಕ ಹೆಚ್ಚಾಗುತ್ತದೆ. ಹಾಗೆ ಮಾತ್ರೆಗಳನ್ನು ಸೇವಿಸುವುದರಿಂದ ತುರಿಕೆ, ಉರಿ ಇತ್ಯಾದಿ ಸಮಸ್ಯೆಗಳು ಕೂಡ ಉಂಟಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಇಷ್ಟವಾಗುವ ಕಡಲೆಬೀಜದ ಬರ್ಫಿ