ಬೆಂಗಳೂರು : ಕೆಲವೊಂದು ಆಹಾರಗಳನ್ನು ಮಿಕ್ಸ್ ಮಾಡಿ ತಿನ್ನಬಾರದು. ಇದರಿಂದ ಅನಾರೋಗ್ಯದ ಸಮಸ್ಯೆ ಕಾಡುತ್ತದೆ. ಅದೇರೀತಿ ಹಾಲು ಮತ್ತು ಮೀನನ್ನು ಮಿಕ್ಸ್ ಮಾಡಿ ತಿನ್ನಬಾರದು ಎಂದು ಹೇಳುತ್ತಾರೆ. ಅದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳೋಣ.
ಹಾಲು ಮತ್ತು ಮೀನು ಎರಡರಲ್ಲೂ ಪೋಷಕಾಂಶ ಸಮೃದ್ಧವಾಗಿದೆ. ಹಾಲಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ, ಪ್ರೋಟೀನ್, ಅಯೋಡಿನ್, ಪೊಟ್ಯಾಶಿಯಂ, ರಂಜಕ, ಮತ್ತು ವಿಟಮಿನ್ ಡಿ ಇರುತ್ತದೆ. ಮೀನುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಜೊತೆಗೆ ಒಮೆಗಾ 3 ಕೊಬ್ಬಿನಾಮ್ಲ, ಮತ್ತು ಅನೇಕ ಜೀವಸತ್ವಗಳಿವೆ.
ವೈಜ್ಞಾನಿಕದ ಪ್ರಕಾರ ಹಾಲು ಮತ್ತು ಮೀನಿನಿಂದ ಅಲರ್ಜಿ ಇರುವವರು ಇದನ್ನು ಒಟ್ಟಿಗೆ ಸೇವಿಸಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹಾಗೇ ಆಯುರ್ವೇದದ ಪ್ರಕಾರ ಇವೆರಡು ವಿಭಿನ್ನ ಆಹಾರವಾಗಿದೆ, ಒಂದು ಮಾಂಸಹಾರ, ಇನ್ನೊಂದು ಸಸ್ಯಹಾರ. ಹಾಲು ತಂಪಾಗಿದ್ದರೆ, ಮೀನು ಉಷ್ಣವಾಗಿದೆ. ಹಾಗಾಗಿ ಇದರಿಂದ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ ಎನ್ನಲಾಗಿದೆ.