ಬೆಂಗಳೂರು : ಬಿಸಿಬಿಸಿಯಾದ ಆಹಾರಗಳನ್ನು ಸೇವಿಸದರೆ ನಾಲಿಗೆ ಸುಟ್ಟು ಬೊಕ್ಕೆಗಳು ಮೂಡುತ್ತವೆ. ಇದರಿಂದ ಆಹಾರಗಳನ್ನು ತಿನ್ನಲು ಆಗದೆ ಪರದಾಡಬೇಕಾಗುತ್ತದೆ. ಈ ಬೊಕ್ಕೆಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ.
ಉಪ್ಪು ಉರಿಯೂತ ಮತ್ತು ನೋವು ನಿವಾರಣೆ ಮಾಡುವುದರ ಜೊತೆಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗೂ ಸೋಂಕನ್ನು ತಡೆಯುತ್ತದೆ. ಆದ್ದರಿಂದ ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಮಿಕ್ಸ್ ಮಾಡಿ ದಿನಕ್ಕೆ 5 ಬಾರಿ ಬಾಯಿ ಮುಕ್ಕಳಿಸಿದರೆ ನಾಲಿಗೆ ಮೇಲಿರುವ ಬೊಕ್ಕೆಗಳು ಬೇಗ ವಾಸಿಯಾಗುತ್ತವೆ.
ಅಡುಗೆ ಸೋಡಾ ಕೂಡ ಉರಿಯೂತ ಮತ್ತು ನೋವು ನಿವಾರಣೆ ಮಾಡುತ್ತದೆ. ಆದ್ದರಿಂದ ಉಗುರು ಬೆಚ್ಚಗಿನ ನೀರಿಗೆ ಅಡುಗೆ ಸೋಡಾ ವನ್ನು ಮಿಕ್ಸ್ ಮಾಡಿ ಬಾಯಿಗೆ ಹಾಕಿ ಕೆಲವು ನಿಮಿಷಗಳ ಕಾಲ ಹಾಗೇ ಇಟ್ಟುಕೊಂಡು ಬಳಿಕ ಉಗಿಯಿರಿ. ಹೀಗೇ ಮಾಡಿದರೆ ನಾಲಿಗೆ ಮೇಲಿರುವ ಬೊಕ್ಕೆಗಳು ಬೇಗ ಉಪಶಮನವಾಗುತ್ತವೆ.