ಬೆಂಗಳೂರು : ಹುಡುಗಿಯರಿಗೆ ಕಣ್ಣಿನ ಹುಬ್ಬು ಹೆಚ್ಚಾಗಿದ್ದರೆ ಮುಖದ ಅಂದ ಕೂಡ ಹೆಚ್ಚಾಗುತ್ತದೆ. ಆದರೆ ಕೆಲವು ಹುಡುಗಿಯರಿಗೆ ಕಣ್ಣಿನ ಹುಬ್ಬು ಬೆಳೆಯುವುದಿಲ್ಲ. ಅಂತವರ ಹುಬ್ಬು ಚೆನ್ನಾಗಿ ಬೆಳೆಯಬೇಕೆಂದರೆ ಈ ಮನೆಮದ್ದು ಬಳಸಿ.
ಪ್ರತಿದಿನ ರಾತ್ರಿ ಹೆರಳೆಣ್ಣೆಯಿಂದ ನಿಮ್ಮ ಕಣ್ಣಿನ ಹುಬ್ಬನ್ನು ಮಸಾಜ್ ಮಾಡಿ ಮಲಗಿ ಬೆಳಿಗ್ಗೆ ತೊಳೆಯಿರಿ. ಇದನ್ನು 2-3 ತಿಂಗಳು ಮಾಡಿದರೆ ಕಣ್ಣಿನ ಹುಬ್ಬು ಚೆನ್ನಾಗಿ ಬೆಳೆಯುತ್ತದೆ.
ಹರಳೆಣ್ಣೆ ಇಲ್ಲದವರು ಆಲೀವ್ ಆಯಿಲ್ ಯನ್ನು ಕೂಡ ಬಳಸಬಹುದು. ಹಾಗೆ ಬಾದಾಮಿ ಎಣ್ಣೆಯನ್ನು ಕೂಡ ಬಳಸಬಹುದು. ಈ ಯಾವುದೇ ಆಯಿಲ್ ಸಿಗದೆ ಇದ್ದರೆ ಎಲ್ಲರ ಮನೆಯಲ್ಲೂ ಬಳಸುವಂತಹ ಕೊಬ್ಬರಿ ಎಣ್ಣೆಯನ್ನು ಬಳಸಬಹುದು.
ಎಲ್ಲದಕ್ಕಿಂತ ಉತ್ತಮವಾದ ಮನೆಮದ್ದೆಂದರೆ ಅದು ತೆಂಗಿನಕಾಯಿಯ ಹಾಲು. ಇದನ್ನು ಕಣ್ಣಿನ ಹುಬ್ಬಿಗೆ ಮಸಾಜ್ ಮಾಡಿ ½ ಗಂಟೆ ಬಿಟ್ಟು ತೊಳೆಯಿರಿ. ಈರುಳ್ಳಿ ರಸ ಹಚ್ಚುವುದರಿಂದಲೂ ಕಣ್ಣಿನ ಹುಬ್ಬು ಚೆನ್ನಾಗಿ ಬೆಳೆಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.