ಬೆಂಗಳೂರು : ಅಡುಗೆಗೆ ಸೇರಿಸಿದ ಎಲ್ಲಾ ಪದಾರ್ಥಗಳು ಸಮಪ್ರಮಾಣದಲ್ಲಿ ಇದ್ದರೆ ಮಾತ್ರ ಅದರ ರುಚಿ ಚೆನ್ನಾಗಿರುತ್ತದೆ. ಒಂದು ವೇಳೆ ಒಂದೇ ಒಂದು ಪದಾರ್ಥ ಹೆಚ್ಚಾದರೆ ಅದರ ರುಚಿ ಕೆಡುತ್ತದೆ. ಅದರಲ್ಲೂ ಉಪ್ಪು. ಅಡುಗೆಗೆ ಉಪ್ಪು ಕಡಿಮೆಯಾದರೆ ಬೇಕಾದಷ್ಟು ಮತ್ತೆ ಹಾಕಿಕೊಳ್ಳಬಹುದು. ಆದರೆ ಅದು ಹೆಚ್ಚಾದರೆ ಏನು ಮಾಡಬೇಕೆಂಬುದಕ್ಕೆ ಇಲ್ಲಿದೆ ಉಪಾಯ.
ಮಾಡಿದ ಅಡುಗೆಗೆ ಉಪ್ಪು ಜಾಸ್ತಿಯಾದರೆ ಅದು ಬಿಸಿಯಿರುವಾಗಲೇ ಅದಕ್ಕೆ ಹಸಿ ಆಲೂಗಡ್ಡೆಯನ್ನು ಪೀಸ್ ಮಾಡಿ ಹಾಕಿ. ಅದು ಅಡುಗೆಯಲ್ಲಿರುವ ಉಪ್ಪಿನಾಂಶವನ್ನು ಹೀರಿಕೊಳ್ಳುತ್ತದೆ. ನಂತರ ಬಡಿಸುವಾಗ ಆ ಪೀಸ್ ಗಳನ್ನು ತೆಗೆದುಬಡಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ