ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆಯರು ಬಳಸುವ ಸೌಂದರ್ಯ ವರ್ಧಕಗಳು, ಸೋಪ್ ಇತ್ಯಾದಿ ವಸ್ತುಗಳಿಂದ ಹೆಣ್ಣು ಮಗುವಿನ ಮೇಲೆ ಎಂಥಾ ಪರಿಣಾಮ ಬೀರುತ್ತದೆ ಗೊತ್ತಾ?
ಈ ಬಗ್ಗೆ ಅಮೆರಿಕಾದ ಸಂಶೋದಕರು ಅಧ್ಯಯನ ನಡೆಸಿದ್ದು, ಗರ್ಭಿಣಿ ಸ್ತ್ರೀಯರು ಬಳಸುವ ಸೌಂದರ್ಯ ವರ್ಧಕಗಳಲ್ಲಿರುವ ರಾಸಾಯನಿಕ ಹುಟ್ಟಲಿರುವ ಮಗು ಹೆಣ್ಣಾದರೆ, ಆ ಮಗುವಿನಲ್ಲಿ ಪ್ರೌಢಾವಸ್ಥೆ ಬೇಗನೇ ಬರುವಂತೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ.
ನಾವು ಬಳಸುವ ಸೌಂದರ್ಯ ವರ್ಧಕ, ಸೋಪ್ ಇತ್ಯಾದಿಗಳಲ್ಲಿರುವ ರಾಸಾಯನಿಕಗಳು, ಚರ್ಮದ ಮೂಲಕ ಅಥವಾ ಉಸಿರಾಟದ ಮೂಲಕ ನಮ್ಮ ದೇಹ ಪ್ರವೇಶಿಸಿ, ನೈಸರ್ಗಿಕ ಸಮತೋಲನವನ್ನು ಬುಡಮೇಲು ಮಾಡುತ್ತದೆ ಎನ್ನುವುದು ತಜ್ಞರ ಅಭಿಮತ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.