ಬೆಂಗಳೂರು : ಗರ್ಭಾವಸ್ಥೆಯಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಒಸಡಿನ ಸಮಸ್ಯೆ ಕೂಡ ಒಂದು. ಗರ್ಭಾವಸ್ಥೆಯಲ್ಲಿ ಕಂಡುಬರುವ ವಸಡಿನ ಸಮಸ್ಯೆ ದೂರಮಾಡಲು ಈ ಮನೆಮದ್ದನ್ನು ಸೇವಿಸಿ.
ಆಲೀವ್ ಆಯಿಲ್ ಹಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಬಹಳ ಸಹಕಾರಿಯಾಗಿದೆ. ನಿಮ್ಮ ಆಹಾರದಲ್ಲಿ ಇದನ್ನು ಬಳಸುವುದರಿಂದ ಹಲ್ಲುಗಳು ದೃಢಗೊಳ್ಳುತ್ತವೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ವಸಡಿನ ಸಮಸ್ಯೆಗಳು ದೂರವಾಗುತ್ತದೆ.