ಬೆಂಗಳೂರು: ಮಲಬದ್ಧತೆ ಉಗುಳಲೂ ಆಗದ ನುಂಗಲೂ ಆಗದ ಸಮಸ್ಯೆ. ಈ ಸಮಸ್ಯೆ ಇದ್ದವರು ಕೆಲವು ಆಹಾರಗಳನ್ನು ತಿನ್ನಲೇಬಾರದು. ಅವು ಯಾವುವು ನೋಡೋಣ.
ಬಿಳಿ ಬ್ರೆಡ್
ಬಿಳಿ ಬ್ರೆಡ್ ಜೀರ್ಣವಾಗುವುದು ಸ್ವಲ್ಪ ನಿಧಾನ. ಹಾಗಾಗಿ ಬಿಳಿ ಬ್ರೆಡ್ ನಿಮ್ಮ ಮಲವಿಸರ್ಜನೆಯನ್ನು ಇನ್ನಷ್ಟು ಕಠಿಣಗೊಳಿಸಬಹುದು. ಇದರ ಬದಲು ವೀಟ್ ಬ್ರೆಡ್ ತಿನ್ನಬಹುದು.
ಕೆಫೈನ್
ಕೆಫೈನ್ ಅಂಶವಿರುವ ಆಹಾರವೆಂದರೆ ಚಹಾ, ಕಾಫಿ ಕೆಲವು ಚಾಕಲೇಟ್ ಗಳು. ಇಂತಹ ಆಹಾರಗಳನ್ನು ಆದಷ್ಟು ಕಡಿಮೆ ಸೇವಿಸಿದರೆ ಎಲ್ಲಾ ಸಮಸ್ಯೆಗಳಿಗೂ ಉತ್ತಮ.
ಸಂಸ್ಕರಿತ ಆಹಾರ
ಮೈದಾ, ಸಂಸ್ಕರಿತ ಅಕ್ಕಿ, ಕುಕ್ಕೀಸ್ ಹಾಗೂ ಪಾಸ್ತಾದಂತಹ ಆಹಾರಗಳಲ್ಲಿ ಫೈಬರ್ ಅಂಶ ಕಡಿಮೆ. ಇಂತಹ ಆಹಾರಗಳು ಕರುಳಿಗೆ ಅಂಟಿನಂತೆ ಆಗುತ್ತದೆ. ಇದು ಮಲಬದ್ಧತೆ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ರಾತ್ರಿ ಆಪಲ್ ಸೇವನೆ
ಆಪಲ್ ದಿನಕ್ಕೊಂದು ಆಪಲ್ ಸೇವಿಸುವುದು ಒಳ್ಳೆಯದೇ. ಬೆಳಗಿನ ಹೊತ್ತು ಸೇವಿಸುವುದು ಮಲಬದ್ಧತೆಗೆ ಉತ್ತಮ. ಆದರೆ ರಾತ್ರಿ ವೇಳೆ ಸೇವಿಸುವುದರಿಂದ ಕರುಳಿನ ಜೀರ್ಣಪ್ರಕ್ರಿಯೆಗೆ ಅಡ್ಡಿ ಮಾಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗಬಹುದು.
ಚಾಕಲೇಟ್
ಎಲ್ಲರಿಗೂ ಚಾಕಲೇಟ್ ಇಷ್ಟವೇ. ಆದರೆ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿ ಕೊಬ್ಬಿನಂಶ ಹೆಚ್ಚು. ಆದರೆ ಫೈಬರ್ ಅಂಶವಿರುವುದಿಲ್ಲ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಮಲಬದ್ಧತೆಗೆ ಕಾರಣವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ