ಇತರರನ್ನು ಶ್ಲಾಘಿಸಲು, ಅಭಿನಂದನೆ ಹೇಳಲು, ಹುರಿದುಂಬಿಸಲು, ಕಾರ್ಯಕ್ರಮಗಳಲ್ಲಿ ನೀವೆಲ್ಲ ಚಪ್ಪಾಳೆ ತಟ್ಟೇ ಇರುತ್ತೀರಾ. ಈಗಿಗಂತೂ ಹೇಳಿ ಚಪ್ಪಾಳೆ ತಟ್ಟಿಸಿಕೊಳ್ಳುವ ಕಾಲ ಬಂದು ಬಿಟ್ಟಿದೆ. ಎರಡು ಕೈ ಎತ್ತಿ ಚಪ್ಪಾಳೆ ಹೊಡೆಯದಿರುವಷ್ಟು ಸೋಮಾರಿತನ ಆವರಿಸಿಕೊಂಡಿದೆ ನಮ್ಮ ಜನರಲ್ಲಿ. ಆದರೆ ಈ ಚಪ್ಪಾಳೆ ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತೇ? ಇದು ತಮಾಷೆ ಅಲ್ಲ.
ಹೌದು ಚಪ್ಪಾಳೆ ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ. ಇಲ್ಲಿದೆ ನೋಡಿ ಚಪ್ಪಾಳೆಯ 6 ಆರೋಗ್ಯ ಲಾಭಗಳು
* ಚಪ್ಪಾಳೆ ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
* ಚಪ್ಪಾಳೆ ಜೀರ್ಣಾಂಗ ತೊಂದರೆಗಳನ್ನೆದುರಿಸುತ್ತಿರುವ ಜನರಿಗೆ ಪರಿಣಾಮಕಾರಿ ಪರಿಹಾರ.
* ಚಪ್ಪಾಳೆ, ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ಪ್ರತಿದಿನ ಚಪ್ಪಾಳೆ ತಟ್ಟುವುದು ಅಧಿಕ ರಕ್ತದೊತ್ತಡ, ಮಧುಮೇಹ, ಖಿನ್ನತೆ, ಸಂಧಿವಾತ, ತಲೆನೋವು, ನಿದ್ರಾಹೀನತೆ ಮತ್ತು ಕೂದಲು ನಷ್ಟದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಲಾಭಕರವಾಗಿರುತ್ತದೆ.
*ಚಪ್ಪಾಳೆ ಮಕ್ಕಳ ಮೋಟಾರ್ ಕೌಶಲಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ- ಅಚ್ಚುಕಟ್ಟಾದ ಕೈಬರಹ, ಕಡಿಮೆ ಕಾಗುಣಿತ ದೋಷ, ಇತ್ಯಾದಿ
ಇತರರನ್ನು ಹುರಿದುಂಬಿಸುವ ಸಂಕೇತವಾಗಿ ತಟ್ಟುವ ಚಪ್ಪಾಳೆಯಿಂದ ನಿಮಗೆಷ್ಟು ಪ್ರಯೋಜನವೆಂದು ತಿಳಿಯಿತಲ್ಲ. ಇನ್ನು ಮುಂದೆ ಚಪ್ಪಾಳೆ ತಟ್ಟಲು ಸೋಮಾರಿತನ ತೋರಬೇಡಿ...ಚಪ್ಪಾಳೆ ತಟ್ಟಿ, ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಿರಿ.